Tuesday, September 22, 2026

BDA Apartments

ಪ್ರತ್ಯೇಕ ಘಟನೆ: ಮಳೆಗೆ ಮನೆಗೋಡೆ ಕುಸಿದು ಯುವಕ ಮತ್ತು ವೃದ್ಧೆ ಸಾವು BDA JK_Adv BDA Adv
Home Crime ಪ್ರತ್ಯೇಕ ಘಟನೆ: ಮಳೆಗೆ ಮನೆಗೋಡೆ ಕುಸಿದು ಯುವಕ ಮತ್ತು ವೃದ್ಧೆ ಸಾವು.

ಪ್ರತ್ಯೇಕ ಘಟನೆ: ಮಳೆಗೆ ಮನೆಗೋಡೆ ಕುಸಿದು ಯುವಕ ಮತ್ತು ವೃದ್ಧೆ ಸಾವು.

ಬೆಳಗಾವಿ, ಜುಲೈ,27,2023(www.justkannada.in): ರಾಜ್ಯದಲ್ಲಿ ಇತ್ತೀಚೆಗೆ ಮುಂಗಾರು ಮಳೆ ಬಿರುಸುಗೊಂಡಿದ್ದು ಮಳೆರಾಯನ ಆರ್ಭಟ ಜೋರಾದ ಹಿನ್ನೆಲೆ ಅನೇಕ ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಮಳೆಯಿಂದ ಮನೆಗೋಡೆ ಕುಸಿದು ಯುವಕ ಮತ್ತು ವೃದ್ಧೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಗಸಿ ಗ್ರಾಮದಲ್ಲಿ ಮಳೆಯಿಂದ ಮನೆಗೋಡೆ ಕುಸಿದು  ಕಾಶಿನಾಥ್ ಸುತಾರ್(23) ಎಂಬ ಯುವಕ ಮೃತಪಟ್ಟಿದ್ದಾರೆ. ನಿರಂತರ ಮಳೆಗೆ ಮನೆ ಗೋಡೆ ನೆನೆದು ಈ ಅವಘಡ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಇನ್ನೊಂದೆಡೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ‌ ಕೋಗಳಿ ಗ್ರಾಮದಲ್ಲಿ ನಿನ್ನೆರಾತ್ರಿ ಮನೆಗೋಡೆ ಕುಸಿದು ಗಂಭೀರ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 60 ವರ್ಷದ ಹಿರಿಯಮ್ಮ ಕೊನೆಯುಸಿರೆಳೆದಿದ್ದಾರೆ. ಹೂವಿನಹಡಗಲಿ ತಾಲೂಕಿನ ಇಟಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ  ನಡೆದಿದೆ.

Key words: young man – old woman -died – house -wall -collapsed