ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ-ನ್ಯೂಜಿಲ್ಯಾಂಡ್ ಇಂದು ಮುಖಾಮುಖಿ

ಕಾರ್ಡಿಫ್​: , ಜೂನ್ 01, 2019 (www.justkannada.in): ವಿಶ್ವಕಪ್​ ಟೂರ್ನಿಯ ಮೂರನೇ ಪಂದ್ಯ ಇಂದು ನಡೆಯಲಿದ್ದು, ನ್ಯೂಜಿಲೆಂಡ್​ ಹಾಗೂ ಶ್ರೀಲಂಕಾ ಮುಖಾಮುಖಿಯಾಗುತ್ತಿವೆ.

ಕೇನ್​ ವಿಲಿಯಮ್ಸನ್​ ನೇತೃತ್ವದ ಕಿವೀಸ್​ ಪಡೆ ಯುವ ಹಾಗೂ ಅನುಭವಿ ಆಟಗಾರರನ್ನು ಹೊಂದಿದೆ. ಈ ತಂಡಕ್ಕೆ ಹೋಲಿಸಿದರೆ ಶ್ರೀಲಂಕಾ ಪಡೆ ಅಷ್ಟು ಸಮರ್ಥವಾಗಿಲ್ಲ ಅನ್ನಿಸುತ್ತೆ. ಕಳೆದ ವಿಶ್ವಕಪ್​ನಲ್ಲಿ ರನ್ನರ್​ ಅಪ್​ ಆಗಿದ್ದ ನ್ಯೂಜಿಲೆಂಡ್​ ಈ ಬಾರಿ ಕಪ್​ ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಉಬಯ ತಂಡಗಳಿಗೂ ಈ ಟೂರ್ನಿಯ ಮೊದಲ ಪಂದ್ಯವಾಗಿದ್ದು, ಎರಡೂ ತಂಡಗಳು ಗೆಲ್ಲುವ ಹುಮ್ಮಸ್ಸಿನಿಂದಲೇ ಕಣಕ್ಕಿಳಿಯಲಿವೆ.

ನ್ಯೂಜಿಲೆಂಡ್: ​ಕೇನ್​ ವಿಲಿಯಮ್ಸನ್​ (ನಾಯಕ), ಟಾಮ್​ ಬ್ಲಂಡೆಲ್​, ಟ್ರೆಂಟ್​ ಬೌಲ್ಟ್​, ಕಾಲಿನ್​ ಡಿ ಗ್ರ್ಯಾಂಡ್​ಹೋಮ್​, ಲೂಕಿ ಫರ್ಗ್ಯುಸನ್​, ಮಾರ್ಟಿನ್​ ಗಪ್ಟಿಲ್​, ಮ್ಯಾಟ್​ ಹೆನ್ರಿ, ಟಾಮ್​ ಲ್ಯಾಥಮ್​​, ಕಾಲಿನ್​ ಮನ್ರೊ, ಜಿಮ್ಮಿ ನಿಶಾಮ್​, ಹೆನ್ರಿ ನಿಕೋಲ್ಸ್​, ಮಿಚೆಲ್​ ಸ್ಯಾಂಟ್ನರ್​, ಇಶ್​ ಸೋಧಿ, ಟಿಮ್​ ಸೌಥಿ, ರಾಸ್​ ಟೇಲರ್​.

ಶ್ರೀಲಂಕಾ: ದಿಮುತ ಕರುಣಾರತ್ನೆ (ನಾಯಕ), ಧನಂಜಯ್​ ಡಿ ಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗ ಲಕ್ಮಲ್​, ಲಸಿತ್​ ಮಲಿಂಗ, ಏಂಜೆಲೊ ಮ್ಯಾಥ್ಯೂಸ್​, ಕುಶಾಲ್ ಮೆಂಡಿಸ್​, ಜೀವನ್​ ಮೆಂಡಿಸ್​, ಕುಶಾಲ್​ ಪರೇರ, ತಿಸಾರ ಪೆರೆರ, ನುವಾನ ಪ್ರದೀಪ್​, ಮಿಲಿಂದ್​ ಸಿರಿವರ್ಧನ, ಲಾಹಿರು ತಿರುಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.