ವಿಶ್ವಕಪ್ ಕ್ರಿಕೆಟ್: ಯಾರೇ ಗೆದ್ದರೂ ಐತಿಹಾಸಿಕ ದಾಖಲೆ

ಲಂಡನ್, ಜುಲೈ 12, 2019 (www.justkannada.in): ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ವೇದಿಕೆಯಾಗಿದೆ.

ಇದೀಗ ಐತಿಹಾಸಿಕ ದಾಖಲೆಯೊಂದಕ್ಕೆ ವೇದಿಕೆ ಕಲ್ಪಿಸುತ್ತಿದೆ. ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್ ತಂಡ ವಿಶ್ಪಕಪ್ ಫೈನಲ್ ಪ್ರವೇಶ ಮಾಡಿದೆ.

ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಫೈನಲ್ ನಲ್ಲಿ ಜಯ ಗಳಿಸಿದರೂ, ನೂತನ ಇತಿಹಾಸ ನಿರ್ಮಾಣವಾಗಲಿದೆ. ಇಂಗ್ಲೆಂಡ್ 1992ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.