ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು: ‘ನಮ್ಮ ಮೆಟ್ರೋ’ದಿಂದ ವಿಶೇಷ ಟಿಕೆಟ್ ವ್ಯವಸ್ಥೆ !

ಬೆಂಗಳೂರು, ಅಕ್ಟೋಬರ್ 19, 2023 (www.justkannada.in): ವಿಶ್ವಕಪ್ಕ್ರಿಕೆಟ್ ಪಂದ್ಯಗಳಿಗಾಗಿನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್ವ್ಯವಸ್ಥೆ ಮಾಡಲಾಗಿದೆ.

ಹೌದು. ಅಕ್ಟೋಬರ್ 20, 26 ಹಾಗೂ ನವೆಂಬರ್ 4, 9, 12 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಪಂದ್ಯಾವಳಿಯ ದಿನದಂದು ರಿಟರ್ನ್ ಜರ್ನಿ ಟಿಕೆಟ್ಗಳನ್ನು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 7 ರಿಂದ ಪಡೆಯಬಹುದು.

ರಿಟರ್ನ್ ಟಿಕೆಟ್ ಬೆಲೆ 50 ರೂ. ಇರಲಿದೆ. ಸಾಮಾನ್ಯ ದರದಲ್ಲಿ 5ರಷ್ಟು ರಿಯಾಯಿತಿ ಇರಲಿದೆ. ಟಿಕೆಟನ್ನು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆ ನಂತರ ಒಂದು ಪ್ರಯಾಣ ಮಾಡಬಹುದಾಗಿದೆ.

ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಿದರೆ, ಪಂದ್ಯಗಳು ನಡೆಯುವ ದಿನಗಳಂದು ಪ್ರಯಾಣಿಸಬಹುದು