ಐಷ್(AIISH) ಪ್ರಾಧ್ಯಾಪಕರ ಕೆಲಸದ ಹೊರೆ ಹೆಚ್ಚಾಗಿದೆ ಎನಿಸುವುದಿಲ್ಲವೇ..?

ಮೈಸೂರು, ಆಗಸ್ಟ್ 17, 2022 (www.justkannada.in): ಮೈಸೂರು ಮೂಲದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಐಷ್)ಯಲ್ಲಿ ಸೇವೆ ಸಲ್ಲಿಸುತ್ತಿರುವ ಓರ್ವ ಪ್ರಾಧ್ಯಾಪಕರಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಿರುವ ಕಾರಣದಿಂದಾಗಿ ಹೆಚ್ಚು ಕೆಲಸದ ಹೊರೆಯಾಗಿರುವ ಒಂದು ಪ್ರಸಂಗ ಬಹಿರಂಗಗೊಂಡಿದೆ.

ಅಜಿಶ್ ಕೆ. ಅಬ್ರಹಂ, ಐಷ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಎಲೆಕ್ಟ್ರಾನಿಕ್ಸ್ ಮತ್ತು ಅಕೌಸ್ಟಿಕ್ಸ್ ಪ್ರಾಧ್ಯಾಪಕರಾಗಿದ್ದು, ಇವರನ್ನು ಜೂನ್ ೩೦, ೨೦೨೨ರಂದು ಡೀನ್ (ಮುಖ್ಯಸ್ಥರು) (ಮೂಲಸೌಕರ್ಯ, ಯೋಜನೆ ಹಾಗೂ ಬೆಂಬಲ) ಆಗಿ ನೇಮಕ ಮಾಡಲಾಗಿದೆ.

ಜೂನ್ ೨೩, ೨೦೨೨ರಂದು ಐಷ್‌ ನ ನಿರ್ದೇಶಕಿ ಎಂ. ಪುಷ್ಪಾವತಿ ಅವರು, ಈ ಸಂಬಂಧ ಒಂದು ಸುತ್ತೋಲೆಯನ್ನು ಹೊರಡಿಸಿ, ಎಲ್ಲಾ ಕಡತಗಳು, ಪೈಲ್‌ ಗಳು ಹಾಗೂ ದಾಖಲೆಗಳನ್ನೂ ಸಹ ಅಬ್ರಹಂ ಅವರಿಗೆ ಹಸ್ತಾಂತರಿಸುವಂತೆ ಹಿಂದಿನ ಡೀನ್ ಡಾ. ಹೆಚ್. ಸುಂದರ ರಾಜು ಅವರಿಗೆ ನಿರ್ದೇಶಿಸಿದ್ದರು.

ಅಬ್ರಹಂ ಅವರು ಅದಾಗಲೇ ರೋಗಿಗಳಿಗಾಗಿ ನಿರ್ಮಿಸುತ್ತಿರುವ ಬಹುಮಹಡಿ ವಸತಿಗೃಹದ ಸಂಯೋಜಕರ ಜವಾಬ್ದಾರಿಯ ಜೊತೆಗೆ, ನಿರ್ಮಾಣ ಹಂತದಲ್ಲಿರುವ ಐಷ್ ಮ್ಯೂಸಿಯಂನ ಸಂಯೋಜಕರು, ಉತ್ತರ ಪ್ರದೇಶದ ಕಾನ್ಪುರ್ ಬಳಿ ನಿರ್ಮಾಣವಾಗುತ್ತಿರುವ ಐಷ್‌ ನ ಆಫ್-ಕ್ಯಾಂಪಸ್ ಕೇಂದ್ರದ ಪ್ರಸ್ತಾಪವನೆ ವಿನ್ಯಾಸ ಹಾಗೂ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಹಾಗೂ ಉತ್ಕೃಷ್ಟ ಕೇಂದ್ರದ ಸಂಯೋಜಕರ ಜವಾಬ್ದಾರಿಯನ್ನೂ ಸಹ ವಹಿಸಿಕೊಂಡಿದ್ದರು.

ಐಷ್‌ ನ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕೇವಲ ಇಬ್ಬರು ಬೋಧಕ ಸಿಬ್ಬಂದಿಗಳು ಮಾತ್ರ ಇದ್ದಾರೆ, ಅಬ್ರಹಂ ಅವರ ಜತೆಗೆ ಎನ್. ಮನೋಹರ್, ರೀಡರ್ ಎಲೆಕ್ಟ್ರಾನಿಕ್ಸ್. ಅಬ್ರಹಂ ಅವರು ಡೀನ್ (ಮೂಲಸೌಕರ್ಯ, ಯೋಜನೆ ಹಾಗೂ ಬೆಂಬಲ) ಆಗಿ ಜೂನ್ ೩೦, ೨೦೨೫ರವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯನ್ನೂ ನಿರ್ವಹಿಸಬೇಕಾಗಿರುವುದನ್ನು ಇಲ್ಲಿ ಗಮನಿಸಬೇಕು. ಇದಕ್ಕಾಗಿ, ಅಂದರೆ ಡೀನ್ ಪಾತ್ರ ನಿರ್ವಹಣೆಗಾಗಿ ಇವರಿಗೆ, ತಮ್ಮ ಮಾಮೂಲಿ ವೇತನ ಹಾಗೂ ಭತ್ಯೆಗಳೊಂದಿಗೆ ಮಾಸಿಕ ರೂ.೫,೦೦೦ ಗೌರವಧನ ಲಭಿಸುತ್ತದೆ.

ಇಲ್ಲಿ ಗಮನಿಸಬೇಕಾಗಿರುವ ಪ್ರಮುಖ ವಿಷಯವೇನೆಂದರೆ, ಈ ಡೀನ್ ಜವಾಬ್ದಾರಿಯಡಿ ಇನ್ನೂ ಹಲವಾರು ಜವಾಬ್ದಾರಿಗಳು ಬರುತ್ತವೆ, ಅವುಗಳೆಂದರೆ: ಎಲ್ಲಾ ನೀತಿ ವಿಷಯಗಳು, ಭವಿಷ್ಯದ ಯೋಜನೆ ರೂಪಿಸುವಿಕೆ ಹಾಗೂ ನಿರ್ದೇಶಕರೊಂದಿಗೆ ಅನುಸರಣೆ ಮಾಡುವುದು; ಸಾಂಸ್ಥಿಕ ಚಟುವಟಿಕೆಗಳ ವಿಸ್ತರಣೆ ಹಾಗೂ ವೈವಿಧ್ಯೀಕರಣವನ್ನು ರೂಪಿಸುವುದು ಹಾಗೂ ಎಲ್ಲಾ ಅಭಿವೃದ್ಧಿ ಪ್ರಸ್ತಾವನೆಗಳನ್ನು ಸಿದ್ಧಪಡಿಸುವುದು, ಸಿವಿಲ್, ಎಲೆಕ್ಟ್ರಿಕಲ್, ಕಾಮಗಾರಿಗಳು, ನೈರ್ಮಲ್ಯ, ನೆಟ್‌ವರ್ಕ್ ಸಿಸ್ಟಂ, ಇತ್ಯಾದಿ ಒಳಗೊಂಡಂತೆ, ಸಂಸ್ಥೆ, ಹೊಸ ಆವರಣಗಳು, ಔಟ್‌ ರೀಚ್ ಕೇಂದ್ರಗಳು ಹಾಗೂ ಹೊಸದಾಗಿ ಸ್ಥಾಪನೆಯಾಗಿರುವ ತಪಾಸಣಾ ಕೇಂದ್ರಗಳು; ಸಚಿವಾಲಯ ಹಾಗೂ ಇನ್ನಿತರೆ ಕೇಂದ್ರಗಳಿಗೆ ಕಳುಹಿಸಬೇಕಾಗಿರುವ ಕಾಲಕಾಲಕ್ಕೆ ಸಿದ್ಧಪಡಿಸಬೇಕಾಗಿರುವ ವಿವಿಧ ವರದಿಗಳ ಸಂಗ್ರಹಕ್ಕಾಗಿ ಅಗತ್ಯವಿರುವ ಯೋಜನೆ ಹಾಗೂ ಕಾಮಗಾರಿಗಳ ಸಾಂಖ್ಯಿಕ ದತ್ತಾಂಶ ನಿರ್ವಹಣೆ; ಭೌತಿಕ ಗುರಿಗಳ ನಿಗಾವಣೆ ಹಾಗೂ ಕಾಮಗಾರಿಗಳ ಹಣ ಬಳಕೆ ಹಾಗೂ ಪ್ರಗತಿ ವರದಿಗಳ ಸಲ್ಲಿಕೆಗಾಗಿ ಪೂರಕ ಕಾಗದಪತ್ರಗಳನ್ನು ಸಿದ್ಧಪಡಿಸುವುದು, ಕಟ್ಟಡಗಳು, ರಸ್ತೆಗಳು, ನೀರು ಸರಬರಾಜು, ನೈರ್ಮಲ್ಯ, ಉದ್ಯಾನವನಗಳು ಹಾಗೂ ತೋಟಗಳು, ಕಮ್ಯುನಿಕೇಷನ್ ನೆಟ್‌ವರ್ಕ್ ಗಳು, ವಾಟರ್ ಕೂಲರ್‌ ಗಳು, ಹವಾನಿಯಂತ್ರಕಗಳು, ದೂರವಾಣಿ, ಇತ್ಯಾದಿಗಳು; ಇಂಜಿನಿಯರಿಂಗ್ ವಿಭಾಗದ ನಿಗಾವಣೆ, ಎಲೆಕ್ಟ್ರಾನಿಕ್ಸ್ ಹಾಗೂ ತೋಟಗಾರಿಕೆಯ ಮೆಟೀರಿಯಲ್ ಅಭಿವೃದ್ಧಿ ನಿರ್ವಹಣೆ, ಭದ್ರತೆ ಹಾಗೂ ಹೌಸ್‌ ಕೀಪಿಂಗ್ ಏಜೆನ್ಸಿ ಜೊತೆಗೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆ, ಯೋಜನೆ ರೂಪಿಸುವಿಕೆಯಿಂದ ಹಿಡಿದು ಅಂದಾಜುಗಳನ್ನು ಸಿದ್ಧಪಡಿಸುವರೆಗೂ ಜವಾಬ್ದಾರಿಗಳಲ್ಲಿ ಸೇರಿವೆ.

ಇದರ ಜೊತೆಗೆ ಅಬ್ರಹಂ ಅವರು ಐಷ್‌ ನ ಆಫ್-ಕ್ಯಾಂಪಸ್ ಕೇಂದ್ರ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಆಗಾಗ ಕಾನ್ಪುರಕ್ಕೂ ಪ್ರಯಾಣಿಸಬೇಕಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಐಷ್‌ನ ನಿರ್ದೇಶಕಿ ಪುಷ್ಪಾವತಿ ಅವರು, “ಡೀನ್ ಹುದ್ದೆ ಸೀನಿಯಾರಿಟಿ ಆಧಾರದ ಮೇಲೆ ಸಂಸ್ಥೆಯ ಬೋಧಕ ಸಿಬ್ಬಂದಿಗೆ ನಾಮನಿರ್ದಶನದ ಆಧಾರದ ಮೇಲೆ ವಹಿಸಲಾಗುವ ಹೆಚ್ಚುವರಿ ಜವಾಬ್ದಾರಿಯಾಗಿರುತ್ತದೆ, ಇದು ಮೂರು ವರ್ಷಗಳ ಅವಧಿಗೆ ಇರುತ್ತದೆ. ಈ ನೀತಿಯು ಇಸಿ ನಿರ್ಧಾರದ ಅನುಮೋದನೆಯ ಪ್ರಕಾರ ರೂಪಿಸಲ್ಪಟ್ಟಿದೆ. ಜೂನ್ ೩೦, ೨೦೨೨ರವರೆಗೂ ಇಎನ್‌ಟಿ ಪ್ರಾಧ್ಯಾಪಕ ಡಾ. ಸುಂದರ ರಾಜು ಅವರು ಡೀನ್ (ಮೂಲಸೌಕರ್ಯ, ಯೋಜನೆ ಹಾಗೂ ಬೆಂಬಲ) ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿ ಪೂರ್ಣಗೊಂಡ ಕಾರಣದಿಂದಾಗಿ ಜೂನ್ ೩೦, ೨೦೨೨ರಂದು ಮುಂದಿನ ಸೀನಿಯರ್ ಪ್ರಾಧ್ಯಪಕರಾಗಿರುವ ಅಬ್ರಹಂ ಅವರನ್ನು ಡೀನ್ ಆಗಿ ನಾಮನಿದೇರ್ಶನ ಮಾಡಲಾಗಿದೆ,” ಎಂದು ವಿವರಿಸಿದರು.

“ಡಾ. ಸುಂದರ ರಾಜು ಅವರು, ಇಎನ್‌ಟಿ ವಿಭಾಗದ ಸದಸ್ಯರಾಗಿದ್ದು, ಆ ವಿಭಾಗದಲ್ಲಿಯೂ ಸಹ, ಅವರನ್ನೂ ಒಳಗೊಂಡಂತೆ ಕೇವಲ ಮೂರು ಬೋಧಕ ಸಿಬ್ಬಂದಿಗಳಿದ್ದಾರೆ. ಅವರೂ ಸಹ ಅವರ ಶೈಕ್ಷಣಿಕ ಹಾಗೂ ಚಿಕಿತ್ಸಕ ಜವಾಬ್ದಾರಿಗಳಿಗೆ ಯಾವುದೇ ರೀತಿ ತಡೆಯಾಗದಿರುವಂತೆ ಡೀನ್ ಜವಾಬ್ದಾರಿಯನ್ನು ವಹಿಸಿದ್ದರು. ಅದೇ ರೀತಿ ಅಬ್ರಹಂ ಅವರೂ ಸಹ ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಹಾಗೂ ಮುಂದುವರೆಯುತ್ತಾರೆ. ಸಂಸ್ಥೆಯಲ್ಲಿ ಮತ್ತೊಂದು ಮುಖ್ಯಸ್ಥರ (ಡೀನ್- ಸಂಶೋಧನೆ) ಹುದ್ದೆ ಇದ್ದು ಅದಕ್ಕೆ ಸೀನಿಯಾರಿಟಿ ಆಧಾರದ ಮೇಲೆ ಆಡಿಯಾಲಜಿ ವಿಭಾಗದ ಪ್ರಾಧ್ಯಾಪಕಿ ಪಿ. ಮಂಜುಳಾ ಅವರು ಜವಾಬ್ದಾರಿ ವಹಿಸಲಾಗಿದೆ. ಆಕೆಗೂ ಸಹ ಅನೇಕ ಜವಾಬ್ದಾರಿಗಳಿವೆ ಹಾಗೂ ಅಬ್ರಹಂ ಅವರಂತೆಯೇ ಶೈಕ್ಷಣಿಕ ಜವಾಬ್ದಾರಿಗಳೂ ಸಹ ಇವೆ. ಅಬ್ರಹಂ ಅವರು ಇಂಟ್ರಾ ಹಾಗೂ ಎಕ್‌ಸ್ಟ್ರಾ ಮ್ಯೂರಲ್ ಫಂಡ್ಸ್ ಇರುವಂತಹ ಸಂಶೋಧನೆಗೂ ಕೊಡುಗೆ ನೀಡುತ್ತಿದ್ದಾರೆ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: workload –mysore-AIISH -professors – increased