Sunday, September 20, 2026

BDA Apartments

ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ- ಹೆಚ್ ಡಿಕೆ ವಿರುದ್ದ ಡಿ.ಕೆ ಶಿವಕುಮಾರ್ ಆಕ...
Home Front Page ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ- ಹೆಚ್ ಡಿಕೆ ವಿರುದ್ದ ಡಿ.ಕೆ ಶಿವಕುಮಾರ್ ಆಕ್ರೋಶ.

ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ- ಹೆಚ್ ಡಿಕೆ ವಿರುದ್ದ ಡಿ.ಕೆ ಶಿವಕುಮಾರ್ ಆಕ್ರೋಶ.

ಬೆಂಗಳೂರು,ಏಪ್ರಿಲ್,30,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡವಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ.  ನಾನು ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ಚುನಾವಣೆಯನ್ನ ಎದುರಿಸುತ್ತೇವೆ ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ.  ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಹೆಚ್.ಡಿ ಕುಮಾರಸ್ವಾಮಿ ಅವರು ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ. ಪಾಪ ಅವರು ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣವನ್ನು ಎಸ್ ಐಟಿ ತನಿಖೆ ನಡೆಸುತ್ತಿದೆ. ಕಾನೂನು ಪ್ರಕಾರ ಏನು ಆಗಬೇಕು. ಅದು ಆಗುತ್ತದೆ ಎಂದರು.ನಾನು ಇಂತಹ ಚಿಲ್ಲರೆ ಕೆಲಸ ಮಾಡಲ್ಲ dks-dk-shivakumar dks dk shivakumar

ಹಾಗೆಯೇ ಪ್ರಜ್ವಲ್  ರೇವಣ್ಣ ವಿದೇಶಕ್ಕೆ ಹೋಗುವಾಗ  ಅವರ ಜತೆಗೆ ಇದ್ದವರು ಯಾರು..?  ಯಾರು ಯಾರಿಗೆ ಕರೆ ಮಾಡಿದ್ರು ಕೇಳಿ ಅವರಿಗೆ ಎಂದು ಪರೋಕ್ಷವಾಗಿ ಹೆಚ್ ಡಿಕೆಗೆ ಟಾಂಗ್ ಕೊಟ್ಟರು.

ಇದು ಹಳೇ ವಿಡಿಯೋ ಎಂದು  ಹೆಚ್ ಡಿ ರೇವಣ್ಣ ಹೇಳಿದ್ದಾರೆ . ಪ್ರಜ್ವಲ್ ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುಸುಗುಸು ಚರ್ಚೆಯಾಗಿತ್ತು ಈಗ ಬಹಿರಂಗವಾಇದೆ. ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಹರಿಹಾಯ್ದರು.

Key words: pen drive, H.D.Kumaraswamy, DK Shivakumar