ನನಗೂ ಸಚಿವ ಸ್ಥಾನ ಕೊಡಿ ಎಂದು ವರಿಷ್ಠರಿಗೆ ಕೇಳಿದ್ದೇನೆ – ಶಾಸಕ ಹೆಚ್.ಸಿ ಬಾಲಕೃಷ್ಣ

ಬೆಂಗಳೂರು,ಮೇ,18,2023(www.justkannada.in):  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲು ಸಜ್ಜಾಗಿದ್ದು ಸಚಿವ ಸ್ಥಾನಕ್ಕಾಗಿ ಶಾಸಕರಿಂದ ಲಾಬಿ ಜೋರಾಗಿದೆ. ಈ ನಡುವೆ ನನಗೂ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಬಳಿಕ ಕೇಳಿದ್ದೇನೆ. ಯಾರಿಗೆ ಸ್ಥಾನ ನೀಡುತ್ತದೆ ಅನ್ನೋದನ್ನ ನೋಡೋಣ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದ್ದಾರೆ.

ಇಂದು ವಿಮಾನ ನಿಲ್ದಾಣದ ಬಳಿ ಮಾತನಾಡಿದ  ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಮತ್ತೊಮ್ಮೆ ಸಿಎಂ ಆಗಿ ಸಿದ್ದರಾಮಯ್ಯರನ್ನ ಹೈಕಮಾಂಡ್ ಆಯ್ಕೆ ಮಾಡಿದೆ.  ಅಧಿಕಾರ ಹಂಚಿಕೆ ಬಗ್ಗೆ ಹೇಳುತ್ತಿದ್ದಾರೆ, ಮುಂದೆ ನೋಡೋಣ, 20:30, 30:40 ಸೂತ್ರಾನಾ ಅನ್ನೋದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

Key words: asked – ministerial –post-MLA- HC Balakrishna