ಡಿಕೆಶಿ ಪರ ಹೋರಾಟಕ್ಕೆ ಕರೆಯಲು ಅದೇನು ಬೀಗರೂಟ ಅಲ್ಲ: ಎಚ್ಡಿಕೆಗೆ ಟಾಂಗ್ ಕೊಟ್ಟ ಚೆಲುವರಾಯಸ್ವಾಮಿ

ಬೆಂಗಳೂರು, ಸೆಪ್ಟೆಂಬರ್ 15, 2019 (www.justkannada.in): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಚೆಲುವರಾಯಸ್ವಾಮಿ ಟಾಂಗ್ ನೀಡಿದ್ದಾರೆ.

ಡಿಕೆಶಿ ಪರ ಪ್ರತಿಭಟನೆಗೆ ಆಹ್ವಾನ ನೀಡಲು ಅದೇನು ಬೀಗರೂಟ ಆಗಿರಲಿಲ್ಲ. ಸಮ್ಮಿಶ್ರ ಸರ್ಕಾರ ಉಳಿಸಲು ಡಿ.ಕೆ. ಶಿವಕುಮಾರ್ ಶ್ರಮವಹಿಸಿದ್ದರು. ಅವರಿಗೆ ಬೆಂಬಲ ಕುಮಾರಸ್ವಾಮಿ ಬರಲೇ ಇಲ್ಲ ಎಂದು ಚೆಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನನಗೇನು ಆಹ್ವಾನ ಬಂದಿರಲಿಲ್ಲ. ಸಮುದಾಯದ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ನಾನು ಹೋಗಿದ್ದೆ. ಈ ಮೂಲಕ ಎಚ್ಡಿಕೆ ತಮ್ಮ ನೈಜ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.