Saturday, September 19, 2026

BDA Apartments

Home Front Page ಬ್ರೈನ್ ಡೆಡ್ ಆಗಿ ಮಹಿಳೆ ಮೃತ:  ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಸ್ಥರು.

ಬ್ರೈನ್ ಡೆಡ್ ಆಗಿ ಮಹಿಳೆ ಮೃತ:  ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಸ್ಥರು.

ಮೈಸೂರು,ಮೇ,17,2022(www.justkannada.in): ಮೈಸೂರಿನಲ್ಲಿ  ಬ್ರೈನ್ ಡೆಡ್ ಆಗಿ ಮಹಿಳೆ ಮೃತಪಟ್ಟಿದ್ದು, ಕುಟುಂಬಸ್ಥರು ಮಹಿಳೆಯ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಯಾದವಗಿರಿ ನಿವಾಸಿ ಜಯಮ್ಮ(59) ಅವರು ಮೆದುಳು ನಿಷ್ಕ್ರಿಯಗೊಂಡು ಇಂದು ಬೆಳಿಗ್ಗೆ ಮೃತಪಟ್ಟಿದ್ದು, ಕುಟುಂಬಸ್ಥರು ಮೃತ ಜಯಮ್ಮ ಅವರ ಅಂಗಾಗ ದಾನ ಮಾಡಿದ್ದಾರೆ. ರಕ್ತದೊತ್ತಡದಿಂದ ಅನಾರೋಗ್ಯಕ್ಕಿಡಾದ ಜಯಮ್ಮ ಅವರನ್ನ ಕಳೆದ ಗುರುವಾರ ಮೈಸೂರಿನ ಸಿಇಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಜಯಮ್ಮರನ್ನ  ಅಪೋಲೊ ಆಸ್ಪತ್ರೆಗೆ ರವಾನಿಸಲಾಗಿತ್ತು.ಬ್ರೈನ್ ಡೆಡ್ ಆಗಿ ಮಹಿಳೆ ಮೃತ jayamma

ಆದರೆ ಬ್ರೈನ್ ಡೆಡ್ ಆದ ಕಾರಣ ಇಂದು ಬೆಳಿಗ್ಗೆ ಜಯಮ್ಮ ಮೃತಪಟ್ಟಿದ್ದಾರೆ. ಜಯಮ್ಮ ಅವರು ಒಬ್ಬರು ಪುತ್ರಿಯನ್ನ ಅಗಲಿದ್ದಾರೆ.

Key words: Woman –dies-Brain Dead-organ –donated-mysore