ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ.

 

ಬೆಂಗಳೂರು,ಮೇ,17,2022(www.justkannada.in): ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅವರು ಇಂದು  ಅಧಿಕಾರ ಸ್ವೀಕಾರ ಮಾಡಿದರು.

ಕಮಿಷನರ್ ಕಚೇರಿಯಲ್ಲಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕರಿಸಿದ್ದು, ನಿರ್ಗಮಿತ ಕಮಿಷನರ್ ಕಮಲ್ ಪಂತ್  ಅವರು ಬ್ಯಾಟನ್ ಹಸ್ತಾಂತರಿಸಿದರು. ನಿನ್ನೆ ರಾಜ್ಯ ಸರ್ಕಾರ ಕಮಲ್ ಪಂತ್​ ರನ್ನು ವರ್ಗಾವಣೆ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ಪ್ರತಾಪ್ ರೆಡ್ಡಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು.

ಪ್ರತಾಪ್​ ರೆಡ್ಡಿ ಅವರು ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು. ಪ್ರತಾಪ್ ಪ್ರತಾಪ್‌ ರೆಡ್ಡಿ, 1991 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಆಂಧ್ರಪ್ರದೇಶದ ಗುಂಟೂರು ಮೂಲದವರು. ಹಾಸನದ ಎಎಸ್​ಪಿಯಾಗಿ ಕರ್ನಾಟಕ ಕ್ಯಾಡರ್‌ ನಲ್ಲಿ ಸೇವೆ ಆರಂಭಿಸಿದ್ದರು. ಈ ಹಿಂದೆ ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಸದ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸ್ವೀಕರಿಸಿದ್ದಾರೆ.

Key words: Pratap Reddy – sworn –power- Bangalore- City -Police Commissioner