”ಪತ್ನಿ ದುಬೈ, ಪತಿ ಮೈಸೂರು” ಖಿನ್ನತೆಗೊಳಗಾದ ಪತಿ ನೇಣಿಗೆ ಶರಣು…!

ಬೆಂಗಳೂರು,ಡಿಸೆಂಬರ್,21,2020(www.justkannada.in) : ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪತಿ ನೇಣಿಗೆ ಶರಣಾಗಿದ್ದಾರೆ.Teachers,solve,problems,Government,bound,Minister,R.Ashok

ನಗರದ ಸಾತಗಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಂಶೀರ್(33) ಮೃತ ದುರ್ದೈವಿ. ಒಂದು ತಿಂಗಳ ಹಿಂದೆ ದುಬೈಗೆ ತೆರಳಿದ ಪತ್ನಿ ಅಶ್ವಿನಿ. ಪ್ರೀತಿಸಿ ಅನ್ಯಧರ್ಮ ವಿವಾಹವಾಗಿದ್ದ ಶಂಶೀರ್ ಹಾಗೂ ಅಶ್ವಿನಿ. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.

ಶಂಶೀರ್ ಹಾಗೂ ಅಶ್ವಿನಿ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿ ನಡುವೆ ಅನ್ಯೋನ್ಯತೆ ಕೊರತೆ ಹಿನ್ನಲೆ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಶ್ವಿನಿ ತೆರಳಿದ್ದಾರೆ.

Wife-Dubai-Husband-Mysore-Surrendered-husband-surrender ...

ಪತ್ನಿ ದೂರವಾದ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಂಶೀರ್ ನೇಣಿಗೆ ಶರಣಾಗಿದ್ದಾರೆ. ಈ ಪ್ರಕರಣವು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

key words : Wife-Dubai-Husband-Mysore-Surrendered-husband-surrender …