ಅಂಧರಿಗೂ ಸಂವಿಧಾನ ತಲುಪಿಸಲು ಮಹಾರಾಷ್ಟ್ರ ಸರ್ಕಾರ ಮಾಡಿದ್ದೇನು…?

ಮುಂಬೈ,ಡಿಸೆಂಬರ್,21,2020(www.justkannada.in)  : ಅಂಧರು ಭಾರತೀಯ ಸಂವಿಧಾನವನ್ನು ಓದಿ ತಿಳಿದುಕೊಳ್ಳುವಂತಹ ಅವಕಾಶ ಒದಗಿಬಂದಿದೆ.pro-kannada-activist- vatal-nagaraj-opposed-SSLC-exams-conduct-by-Karnataka-government

ಸಂವಿಧಾನದ ಸಂಪೂರ್ಣ ಪುಸ್ತಕವನ್ನು ಬ್ರೈಲ್​ ಲಿಪಿಯಲ್ಲಿ ಪ್ರಿಂಟ್​ ಮಾಡಲಾಗಿದ್ದು, ಈ ವಿಶೇಷ ಪುಸ್ತಕವು ಈಚೆಗೆ ಮುಂಬೈನಲ್ಲಿ ಬಿಡುಗಡೆಯಾಗಿದೆ.

ಥಾಣೆ ಮೂಲದ ಅಸ್ತಿತ್ವ ಎಂಬ ಎನ್​ಜಿಒ ಸಂಸ್ಥೆಯೊಂದು ಸಂವಿಧಾನದ ಪ್ರತಿಯನ್ನು ತಯಾರಿಸಿದೆ. ಇಂದು ಅಂಧರ ಸ್ನೇಹಿಯಾಗಿರುವ ಅನೇಕ ಪುಸ್ತಕಗಳು ಬಂದಿರುವಾಗ ನಿತ್ಯ ಜೀವನಕ್ಕೆ ಆಧಾರವಾಗಿರುವ ಭಾರತೀಯ ಸಂವಿಧಾನದಂಥ ಮಹತ್ವದ ಪುಸ್ತಕದಲ್ಲಿ ಇರುವ ಅಂಶಗಳಿಂದ ಅಂಧರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂಥದ್ದೊಂದು ಯೋಚನೆ ಮಾಡಿ ಬ್ರೈಲ್​ ಲಿಪಿಯಲ್ಲಿ ಹೊರತಂದಿರುವುದಾಗಿ ಸಂಸ್ಥೆ ಹೇಳಿದೆ.

ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಬ್ರೈಲ್ ಲಿಪಿಯಲ್ಲಿ ರಚಿತವಾದ ಭಾರತೀಯ ಸಂವಿಧಾನದ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ. ಅಂಧರು ಕೂಡ ಸಂವಿಧಾನವನ್ನು ಓದುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಈ ಕಾರ್ಯ ಕೈಗೊಂಡಿದೆ ಎಂದಿದ್ದಾರೆ.

ಎಲ್ಲ ಅಂಗಾಂಗಗಳು ಸರಿಯಿದ್ದರೂ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇರುವವರು ಅತ್ಯಂತ ವಿರಳ. ಆದರೆ, ಸಾಮಾನ್ಯ ಜನರಿಗೆ ಹೋಲಿಸಿದರೆ ಅಂಧರಲ್ಲಿ ತಿಳಿದುಕೊಳ್ಳಬೇಕು ಎನ್ನುವ ಮಹಾತ್ವಾಕಾಂಕ್ಷೆ, ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು ಎನ್ನುವ ಆಸೆ ಹೆಚ್ಚು ಎನ್ನಲಾಗಿದೆ.

Constitution-blind-Maharashtra-deliver-What-did- government...?

ಆದರೆ, ಅತ್ಯಲ್ಪ ಮಂದಿ ಅರಿತಿರುವ ಸಂವಿಧಾನದಂಥ ಪುಸ್ತಕದ ಕುರಿತು ಅವರಿವರ ಬಳಿ ಕೇಳಿ ತಿಳಿದುಕೊಳ್ಳುವುದಕ್ಕಿಂತಲೂ ಅಂಧರೇ ಖುದ್ದಾಗಿ ಅದನ್ನು ಅರ್ಥೈಸಿಕೊಂಡು, ಅರಿತರೆ ಅದರ ಆಳವಾದ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ಸಾಧ್ಯ ಎನ್ನುವ ಕಾರಣಕ್ಕೆ ಸಂಸ್ಥೆ ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟಿದ್ದು, ಅನೇಕರ ಮೆಚ್ಚುಗೆಗಳಿಸಿದೆ.

key words : Constitution-blind-Maharashtra-deliver-What-did- government…?