“ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಲಿ” : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ರಾಮನಗರ, ಫೆಬ್ರವರಿ,07,2021(www.justkannada.in) : ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರವನ್ನು ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೇ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ, ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.jk

ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜೀ ಇಲ್ಲ

ಧಾರ್ಮಿಕ ಗುರುಗಳ ಭಾವನೆಗೂ ಸರ್ಕಾರ ಗೌರವ ಕೊಡಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ. ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರ. ಅದು ಸಭಾಪತಿ ಸ್ಥಾನಕ್ಕಾಗಿ ಮೈತ್ರಿಯಾಗಿದ್ದೇವೆ. ಅದನ್ನ ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ. ವಿಷಯಾಧಾರಿತವಾಗಿ, ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗ್ತೇವೆ. ಜನವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜೀ ಇಲ್ಲ ಎಂದಿದ್ದಾರೆ.

ರೈತರ ಬಗ್ಗೆ ಗೌರವ ಇದ್ದರೆ ಅವರನ್ನ ಕರೆದು ಸಭೆ ಮಾಡಬೇಕು

ದೆಹಲಿಯಲ್ಲಿನ ರೈತರ ಹೋರಾಟ ವಿಚಾರ. ಪ್ರಧಾನಮಂತ್ರಿಗೆ ರೈತರ ಬಗ್ಗೆ ಗೌರವ ಇದ್ದರೆ ಅವರನ್ನ ಕರೆದು ಸಭೆ ಮಾಡಬೇಕಿತ್ತು. ಕೃಷಿಮಂತ್ರಿಯನ್ನ ಬಿಟ್ಟು ಸಭೆ ಮಾಡಿಸುವ ಬದಲು ಇವರೇ ಸಭೆ ಮಾಡಲಿ. ಅವರ ಕಾಯ್ದೆಗಳಿಂದ ರೈತರಿಗೆ ಅನುಕೂಲ ಏನು ಎಂದು ತಿಳಿಸಲಿ. ರೈತರ ಗೊಂದಲಗಳಿಗೆ ಮನವರಿಕೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮವಹಿಸಲಿway-Will miss-Before-Government-Warning-Former CM-H.D. Kumaraswamy

ರೈತರು ಮುಂದಿನ ಅಕ್ಟೋಬರ್‌ವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ. ಕಳೆದ 70 ದಿನಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ಹೋರಾಟ ಮಾಡ್ತಿದ್ದಾರೆ. ಹಾಗಾಗಿ, ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನಮಂತ್ರಿ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

key words : way-Will miss-Before-Government-Warning-Former CM-H.D. Kumaraswamy