ಎಲ್ಲಿ ಬೇಕಾದ್ರೂ ಫೋಟೊ ಹಾಕುತ್ತೇವೆ: ಸಿದ್ಧರಾಮಯ್ಯ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ-ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಆಗಸ್ಟ್,18,2022(www.justkannada.in):  ಮುಸ್ಲೀಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಯಾಕೆ ಹಾಕಿದ್ರು ಎಂದು ಪ್ರಶ್ನಿಸಿದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಮುಸ್ಲೀಂ ಸಮುದಾಯ ಓಲೈಕೆಗೆ ಸಾವರ್ಕರ್ ಫೋಟೊಗೆ ವಿರೋಧ ಮಾಡುತ್ತಿದ್ದಾರೆ. ಇದೇ ಈತಿ  ಮಸ್ಲಿಮರಿಗಾಗಿ  ನೆಹರು ದೇಶ ವಿಭಜನೆ ಮಾಡಿದ್ರು. ಸಿದ್ಧರಾಮಯ್ಯನೂ ಹಾಗೆ ಮಾಡಬಹುದು ಅಂದುಕೊಂಡಿದ್ದಾರೆ. ಮುಸ್ಲೀಂ ಏರಿಯಾದಲ್ಲೇ ಚುನಾವಣೆ ನಿಲ್ಲಲು ಮುಂದಾಗಿದ್ದಾರೆ.  ಸಿದ್ಧರಾಮಯ್ಯ  ಮತ್ತೆ ಸಿಎಂ ಆಗುತ್ತೇನೆಂದು ಹೇಳಿಕೆ ಕೊಡ್ತಿದ್ದಾರೆ.

ಇದು ಪಾಕಿಸ್ತಾನ ಅಲ್ಲ, ಭಾರತ,  ಇಲ್ಲಿ  ಎಲ್ಲಿ ಬೇಕಾದ್ರೂ ಫೋಟೊ ಹಾಕ್ತೇವರ.  ಜನರಿಗೆ ಸ್ವಾತಂತ್ರ ಇದೆ ಸಿದ್ಧರಾಮಯ್ಯ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು.

Key words: former CM- Siddaramaiah – Muslim area-KS Eshwarappa.