Monday, September 28, 2026

BDA Apartments

ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಅವರೇ ಮುಂದಿನ ಸಿಎಂ ಅಂತಾ ಘೋಷಿಸಲಿ- ಬಿಜೆಪಿಗೆ ...
Home Front Page ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಅವರೇ ಮುಂದಿನ ಸಿಎಂ ಅಂತಾ ಘೋಷಿಸಲಿ- ಬಿಜೆಪಿಗೆ ಎಂ.ಬಿ...

ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಅವರೇ ಮುಂದಿನ ಸಿಎಂ ಅಂತಾ ಘೋಷಿಸಲಿ- ಬಿಜೆಪಿಗೆ ಎಂ.ಬಿ ಪಾಟೀಲ್ ಸವಾಲು.

ಬೆಂಗಳೂರು,ಆಗಸ್ಟ್,18,2022(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಎಂ.ಬಿ ಪಾಟೀಲ್,  ಬಿಎಸ್ ವೈಗೆ  75 ವರ್ಷ ಆಗಿದೆ ಎಂದು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು. ಈಗ ಮತ್ತೆ ಬೇರೆ ಹುದ್ದೆ ನೀಡಿದ್ದಾರೆ. ಬಿಜೆಪಿ ನಾಯಕರಿಗೆ ಬಿಎಸ್ ವೈ ಮೇಲೆ ಈಗ ಪ್ರೀತಿ ಬಂತಾ..? ಬಿಜೆಪಿಗೆ ಬಿಎಸ್ ವೈ ಮಹತ್ವ ಗೊತ್ತಾಗಿದೆ ಎಂದರು.ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಅವರೇ ಮುಂದಿನ ಸಿಎಂ ಅಂತಾ ಘೋಷಿಸಲಿ mb patil mb

ರಾಜಕೀಯ ನಿವೃತ್ತಿ ಬಗ್ಗೆ  ಬಿಎಸ್ ವೈ ಹೇಳಿದ್ದರು. ಹಾಗಾಗಿ ಬಿಜೆಪಿಯಲ್ಲಿ ಕೆಲ ಬದಲಾವಣೆ ನಡೆದಿದೆ. ಬಿಜೆಪಿ  ಅಸ್ತಿತ್ವ ಉಳಿಸಿಕೊಳ್ಳಲು ಈಗ  ಸ್ಥಾನ ನೀಡಿದ್ದಾರೆ .  ಬಿಎಸ್ ವೈ  ಉಪಯೋಗಿಸಿ ಮುಂದೆ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿದ್ದಾರೆ. . ಬಿಎಸ್ ವೈ ಮೇಲೆ ಪ್ರೀತಿ ಇದ್ರೆ ಮುಂದಿನ ಸಿಎಂ ಎನ್ನಲಿ ನೋಡೋಣಾ ಎಂದು ಸವಾಲು ಹಾಕಿದರು.

Key words: BS yeddyurappa- declare -next CM – MB Patil- challenge – BJP.