ಎಲ್ಲೆಂದರಲ್ಲಿ ಕಸ ಬಿಸಾಡಿದ್ರೋ ಜೋಕೆ..!

ಮೈಸೂರು,ಫೆಬ್ರವರಿ,07,2021(www.justkannada.in) : ಕಸ ಬಿಸಾಡುವವರಿಂದಲೇ ಕಸವನ್ನ ಎತ್ತಿಸುವ ಕಾರ್ಯಕ್ಕೆ ಪಾಲಿಕೆ ವಿಚಕ್ಷಣಾ ಸಿಬ್ಬಂದಿ ಮುಂದಾಗಿದ್ದಾರೆ.jkಸ್ವಚ್ಛತೆ ಕಾಪಾಡಲು ಪಾಲಿಕೆ ಸಿಬ್ಬಂದಿ ಹಗಲಿರುಳು ಕಾರ್ಯೋನ್ಮುಖರಾಗಿದ್ದು, ಪಾಲಿಕೆ ನಿಯೋಜಿತ ಸಿಬ್ಬಂದಿ ರಾತ್ರಿ ವೀಕ್ಷಣೆಯಲ್ಲಿದ್ದು, ಕಸ ಎಸೆಯುವವರ ಮೇಲೆ ನಿಗಾವಹಿಸಿದ್ದಾರೆ.

 

ದೇವನೂರು ಕೆರೆ ರಸ್ತೆಯಲ್ಲಿ ಕಸ ಎಸೆದು ಸಿಕ್ಕಿಬಿದ್ದವರಿಗೆ ಪಾಲಿಕೆ ಸಿಬ್ಬಂದಿಯಿಂದ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಈ ರೀತಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಬುದ್ಧಿಮಾತು ಹೇಳಿದ್ದು, ನಿಗದಿತ ಸ್ಥಳಗಳಲ್ಲೇ ಕಸ ವಿಲೇವಾರಿ ಮಾಡುವಂತೆ ಸಲಹೆ ನೀಡಿದ್ದಾರೆ.

key words : Wherever-Garbage-thrown-Wake up