ರಾಜಕಾರಣಿಗಳು ಕೋರ್ಟ್ ಮೊರೆ ಹೋಗಿದ್ದು, ತಪ್ಪಲ್ಲ : ಸಚಿವ ಶ್ರೀರಾಮುಲು

ಬೆಂಗಳೂರು,ಮಾರ್ಚ್,07,2021(www.justkannada.in) :  ಶಾಸಕರು ಕಾಂಗ್ರೆಸ್ ಬಿಟ್ಟು ಬಂದ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಅಂಥವರ ತೆಜೋವಧೆ ಮಾಡುವಂತಹ ಸಂದರ್ಭದಲ್ಲಿ ಅವರು ಕೋರ್ಟ್ ಗೆ ಹೋಗಿದ್ದು ತಪ್ಪಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

jkಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಿಗೆ ಯಾರಿಗೂ ತೇಜೋವಧೆ ಮಾಡುವ ಹಕ್ಕಿಲ್ಲ. ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದರೆ ಎಲ್ಲೋ ಒಂದು ಕಡೆ ಅವರಿಗೆ ಅನುಮಾನ ಬಂದಿದೆ. ಸಿಡಿ ವಿಚಾರದಲ್ಲಿ ಮಾತ್ರ ಅವರು ಕೋರ್ಟ್ ಗೆ ಹೋಗಿಲ್ಲ. ಬೇರೆ, ಬೇರೆ ಕಾರಣಗಳಿಂದ ಹೋಗಿದ್ದಾರೆ ಎಂದರು.

ಮತ್ತಷ್ಟು ಸಚಿವರು ಕೋರ್ಟ್ ಗೆ ಹೋಗುವ ಬಗ್ಗೆ ನಾನು ಹೇಗೆ ಭವಿಷ್ಯ ಹೇಳಲು ಆಗುತ್ತದೆ. ನಾನು ಒಂದು ಸಿಡಿ ಬಂದಿದ್ದಕ್ಕೆ ಉಲ್ಲೇಖ ಮಾಡಲು ಇಷ್ಟ ಪಡುವುದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡುವದು ಸಮಂಜಸವಲ್ಲ. ತನಿಖೆ ನಂತರ ಸತ್ಯ- ಸುಳ್ಳು ಗೊತ್ತಾಗುತ್ತದೆ ಎಂದಿದ್ದಾರೆ.

Politicians-Court-More-Has gone-Not wrong-Minister-Sriramulu

ಯಡಿಯೂರಪ್ಪ ಸಿಎಂ ಇದ್ದಾಗ ಈ ರೀತಿ ಘಟನೆ ನಡೆಯುತ್ತಿವೆ ಎನ್ನುವುದಕ್ಕಿಂತ, ಯಾವ ರೀತಿ ಅದನ್ನು ಸರಿಪಡಿಸಬೇಕು ಎನ್ನುವದು ವಿಚಾರ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

key words : Politicians-Court-More-Has gone-Not wrong-Minister-Sriramulu