ನೈಸ್ ರಸ್ತೆಯಲ್ಲಿ ಕಾರು ಉರುಳಿ, ಚಾಲಕ ಸಾವು 

ಬೆಂಗಳೂರು,ಮಾರ್ಚ್,07,2021(www.justkannada.in) :  ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಕಾರೊಂದು ಉರುಳಿ ಬಿದ್ದಿದ್ದು, ಚಾಲಕ ಪವನ್‌ಕುಮಾರ್ ಜೈನ್ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.jkಟಿ.ದಾಸರಹಳ್ಳಿ ನಿವಾಸಿ ಪವನ್‌ಕುಮಾರ್, ತಮ್ಮ ಪತ್ನಿ ಪುಷ್ಪಾ (40), ಮಗ ವಿನೀತ್ (23) ಹಾಗೂ ಮಗಳು ವರ್ಷಾ (18) ಜೊತೆ ಕೃ಼ಷ್ಣಗಿರಿಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ಕೃಷ್ಣಗಿರಿಯ ಜೈನ್ ಮಂದಿರಕ್ಕೆ ಹೋಗುವುದಕ್ಕಾಗಿ ಕುಟುಂಬ ಭಾನುವಾರ ಬೆಳಿಗ್ಗೆ ಮನೆಯಿಂದ ಕಾರಿನಲ್ಲಿ ತೆರಳುತ್ತಿತ್ತು. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಲಾಗಿತ್ತು. ಹೀಗಾಗಿ, ಕಾರು ಉರುಳಿ ಬಿದ್ದಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

nice road-Car overturn-driver-death 

‘ಅವಘಡದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಪುಷ್ಪಾ, ವಿನಿತ್ ಹಾಗೂ ವರ್ಷಾ ಅವರಿಗೂ ಗಾಯವಾಗಿದೆ. ಅವರೆಲ್ಲ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್‌ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ತಿಳಿಸಿದರು.

key words : nice road-Car overturn-driver-death