Tuesday, September 22, 2026

BDA Apartments

ಬಾಲಿವುಡ್ ನಟಿ ಕಂಗನಾಗೆ ಕೋರ್ಟ್ ಕಂಟಕ ! BDA JK_Adv BDA Adv
Home Cinema ಬಾಲಿವುಡ್ ನಟಿ ಕಂಗನಾಗೆ ಕೋರ್ಟ್ ಕಂಟಕ !

ಬಾಲಿವುಡ್ ನಟಿ ಕಂಗನಾಗೆ ಕೋರ್ಟ್ ಕಂಟಕ !

ಬೆಂಗಳೂರು, ಮಾರ್ಚ್ 03, 2021 (www.justkannada.in): ಬಾಲಿವುಡ್ ನಟಿ ಕಂಗನಾ ವಿರುದ್ಧ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಂದು (ಮಾರ್ಚ್1) ವಾರೆಂಟ್ ಹೊರಡಿಸಿದೆ.

ಗೀತ ರಚನಕಾರ ಜಾವೇದ್ ಅಖ್ತರ್ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.

ಅಂದಹಾಗೆ ನಟಿ ಕಂಗನಾ ರನೌತ್ ಟಿವಿ ಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್ ವಿರುದ್ಧ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ವಿರುದ್ಧ ಜಾವೇದ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಗೆ ಮಾರ್ಚ್ 1 ರಂದು ಹಾಜರಾಗುವಂತೆ ಕಂಗನಾ ಅವರಿಗೆ ಫೆ.1ರಂದು ನ್ಯಾಯಾಲಯ ಸಮನ್ಸ್ ನೀಡಿತ್ತು.