Sunday, September 13, 2026

BDA Apartments

ಮಾದಕ ವಸ್ತುಗಳು ಪತ್ತೆ ಹಿನ್ನೆಲೆ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಬಂಧನ BDA J...
Home Crime ಮಾದಕ ವಸ್ತುಗಳು ಪತ್ತೆ ಹಿನ್ನೆಲೆ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಬಂಧನ

ಮಾದಕ ವಸ್ತುಗಳು ಪತ್ತೆ ಹಿನ್ನೆಲೆ: ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ಬಂಧನ

ಬೆಂಗಳೂರು,ಡಿಸೆಂಬರ್,6,2025 (www.justkannada.in): ಸಿಗರೇಟ್ ಮತ್ತು ನಿಷೇಧಿತ ವಸ್ತು ಪತ್ತೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ ರೊಬ್ಬರನ್ನು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ಪಾಟೀಲ್ ಬಂಧಿತ ವಾರ್ಡರ್. ಕರ್ತವ್ಯ ನಿರತ ಜೈಲಿನ ವಾರ್ಡರ್ ರಾಹುಲ್ ಪಾಟೀಲ್  ಬಳಿ ಮಾದಕ ವಸ್ತುಗಳು ಪತ್ತೆಯಾದ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ. ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ ವಾರ್ಡರ್ ರಾಹುಲ್ ಪಾಟೀಲ್ ಬಳಿ ಸಿಗರೇಟ್ ಪ್ಯಾಕ್, ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಮುಖ್ಯದ್ವಾರದಲ್ಲಿ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ ರಾಹುಲ್ ಪಾಟೀಲ್ ಬಳಿ 2 ಸಿಗರೇಟ್ ಪ್ಯಾಕ್, 60 ಗ್ರಾಂ ಮಾದಕ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲು ಅಧೀಕ್ಷಕ ಪರಮೇಶ್ ಅವರ ದೂರಿನ ಆಧಾರದ ಮೇಲೆ ರಾಹುಲ್ ಪಾಟೀಲ್ ನನ್ನು ಬಂಧಿಸಲಾಗಿದೆ.

Key words: Warder, Parappana Agrahara Jail, arrested