Saturday, September 19, 2026

BDA Apartments

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಖಂಡನೀಯ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ- ಸಚಿ...
Home Crime ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಖಂಡನೀಯ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ- ಸಚಿವ ಕೆಜೆ ಜಾರ್ಜ್

ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಖಂಡನೀಯ: ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ- ಸಚಿವ ಕೆಜೆ ಜಾರ್ಜ್

ಚಿಕ್ಕಮಗಳೂರು, ಡಿಸೆಂಬರ್ 6,2025 (www.justkannada.in):  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಎಂಬುವವರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ಗಣೇಶ್ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು ಎನ್ನಲಾಗಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಗಣೇಶ್ ಕುಟುಂಬಸ್ಥರಿಗೆ  ಸಾಂತ್ವನ ಹೇಳಿದ್ದಾರೆ.

ಬಳಿಕ ಮಾತನಾಡಿರುವ ಸಚಿವ ಕೆ.ಜೆ ಜಾರ್ಜ್ ಭಿನ್ನಾಭಿಪ್ರಾಯಕ್ಕೆ ಹತ್ಯೆ ಮಾಡಿರೋದು ಖಂಡನೀಯ.  ದತ್ತಜಯಂತಿ ಶಾಂತಿಯಿಂದ ನಡೆದ ಬಳಿಕವೂ ಹತ್ಯೆಯಾಗಿದೆ ಕಾರ್ಯಕರ್ತರ ಹತ್ಯೆ ಜಿಲ್ಲೆಗೆ ಶೋಕ ತರುವಂತ ಘಟನೆ. ಈಗಾಗಲೇ ಐವರ ಬಂಧನವಾಗಿದ್ದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುತ್ತೆ  ಎಂದು ತಿಳಿಸಿದರು.

Key words: Congress, worker, murder, condemnable, Minister, KJ George