ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರಿಂದ ಪೊರಕೆ ಹಿಡಿದು ಧರಣಿ

ಮೈಸೂರು,ನವೆಂಬರ್,09,2020(www.justkannada.in) :  ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ವಿವಿಧ ಗ್ರಾ.ಪಂ.ಪೌರಕಾರ್ಮಿಕರು ದಲಿತ ಸಂಘರ್ಷ ಸಮಿತಿ ಮತ್ತು ಪೌರಕಾರ್ಮಿಕ ಅಸಂಘಟಿತ ಕಾರ್ಮಿಕ ವಿಭಾಗದ ನೇತೃತ್ವದಲ್ಲಿ ಪೊರಕೆ ಹಿಡಿದು ಧರಣಿ ನಡೆಸಲಾಯಿತು.kannada-journalist-media-fourth-estate-under-loss

ಜಿಲ್ಲಾ ಪಂಚಾಯತ್ ಬಳಿ ಜಮಾವಣೆಗೊಂಡ  ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಹರಿಹರ ಆನಂದಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತ್ ಗಳಲ್ಲಿನ ಜನರ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ಸ್ವಚ್ಛತಾಗಾರರು ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟು ತಮ್ಮ ಜೀವನೋಪಾಯಕ್ಕಾಗಿ ಅನ್ಯಮಾರ್ಗವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದುಕೊಂಡು, ಸ್ವಚ್ಛತಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿಯೂ ಈ ನೌಕರರಿಗೆ ಯಾವುದೇ ರೀತಿಯ ಕೆಲಸದ ಭದ್ರತೆ ಇಲ್ಲ ಎಂದರು.

ಇವರು ಮಾಡುವ ಕೆಲಸದ ಅನುಮೋದನೆ ನೇಮಕಾತಿ ಪ್ರಕ್ರಿಯೆ ಅತ್ಯಾವಶ್ಯಕವಾಗಿದೆ. ಈ ಕುರಿತು ಹಲವು ಗೊಂದಲಗಳು ಸೃಷ್ಟಿಯಾಗಿದೆ. ಗ್ರಾಪಂ ನಲ್ಲಿರುವ ಎಲ್ಲಾ ಪೌರಕಾರ್ಮಿಕರನ್ನೂ ಸರಕಾರವು ಸರಕಾರಿ ನೌಕರರೆಂದು ಪರಿಗಣಿಸಬೇಕು. ಗ್ರಾಪಂ ಗಳಲ್ಲಿ ಹಾಲಿ ಪೌರಕಾರ್ಮಿಕರಾಗಿ ನಿವೇಶನ ಮಂಜೂರು ಮಾಡಲು ಸಂಬಂಧಪಟ್ಟವರಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರ ಇಲಾಖೆಯ 2020ನೇ ವಾರ್ಷಿಕ ಸಾಲಿನ ಆದೇಶದಂತೆ ಕನಿಷ್ಠ ವೇತನ, ಇಎಸ್ ಐ, ಪಿಎಫ್, ಸೌಲಭ್ಯಗಳನ್ನು ಕಲ್ಪಿಸುವುದು. ಗ್ರಾಪಂ ವ್ಯಾಪ್ತಿಯ ಹಾಲಿ ವಾಸ ಮಾಡುತ್ತಿರುವ ಪೌರಕಾರ್ಮಿಕರ ನಿವೇಶನಗಳಿಗೆ ಹಕ್ಕುಪತ್ರ, ಸ್ವಾಧೀನ ಪತ್ರಗಳನ್ನು ಮಂಜೂರು ಮಾಡಿಸುವುದು ಸೇರಿದಂತೆ ವಿದ್ಯಾರ್ಹತೆಗನುಗುಣವಾಗಿ ಮುಂಬಡ್ತಿ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಡಾ.ಆಲಗೂಡು ಚಂದ್ರಶೇಖರ್, ಆರ್ಟಿಸ್ಟ್ ಎಸ್.ನಾಗರಾಜ್, ಡಿ.ಎನ್.ಬಾಬು, ಮೈಸೂರು ಮಹದೇವ, ಮಂಚಯ್ಯ, ಆರ್ ರಾಜು ಕೆಂಪಯ್ಯನಹುಂಡಿ ಇತರರು ಭಾಗವಹಿಸಿದ್ದರು.Wake,civilian,workers,demand,demands,met

key words : Wake-civilian-workers-demand-demands-met