ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನವೆಂಬರ್,09,2020(www.justkannada.in) : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಪೌರಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.kannada-journalist-media-fourth-estate-under-loss

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಜಮಾವಣೆಗೊಂಡ ಪ್ರತಿಭಟನಕಾರರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮಪಂಚಾಯತ್ ಗಳಲ್ಲಿ ನೇರನೇಮಕಾತಿ ಮತ್ತು ನೇರಪಾವತಿಯ ಸರಕಾರದ ಆಯ್ಕೆ ಸಂದರ್ಭದಲ್ಲಿ ಕೈಬಿಟ್ಟಿರುವ ಪೌರಕಾರ್ಮಿಕರನ್ನು ಕೂಡಲೇ ನೇಮಕಾತಿಗೊಳಿಸಬೇಕೆಂದು ಒತ್ತಾಯಿಸಿದರು.

ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನಿವೇಶನ ಅಥವಾ ಮನೆಯನ್ನು ಕಟ್ಟಿಕೊಡುವುದರ ಬಗ್ಗೆ ಮತ್ತು ನೇರನೇಮಕಾತಿಯಡಿಯಲ್ಲಿ 60ವರ್ಷ ವಯೋಮಿತಿ ಹೊಂದಿ ಕೈಬಿಟ್ಟಿರುವ ಪೌರಕಾರ್ಮಿಕರಿಗೆ ಕೂಡಲೇ ಅವರಿಗೆ ಕೆಲಸ ನೀಡಬೇಕು ಎಂದರು.

ಕುಟುಂಬದ ಒಬ್ಬ ಅವಲಂಬಿತರಿಗೆ ಕೆಲಸವನ್ನು ನೀಡುವುದು ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಪರಿಹಾರವನ್ನು ನೀಡುವುದು ಮತ್ತು ಈಗಾಗಲೇ ಕೆಲಸದ ಅವಧಿಯಲ್ಲಿ ಮೃತಪಟ್ಟಿರುವ ಕುಟುಂಬದ ನಿರ್ವಹಣೆಗಾಗಿ ಒಬ್ಬರಿಗೆ ಕೆಲಸವನ್ನು ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿ.ಆರ್.ಚಿನ್ನಪ್ಪ, ಕೆ.ಗೋಪಾಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.Protest,demanding,various,demands

key words : Protest-demanding-various-demands