Sunday, September 13, 2026

BDA Apartments

ನ.13 ರಂದು ಒಂದೇ ದಿನ ಸರಳ ಹಂಪಿ ಉತ್ಸವ ಆಚರಣೆಗೆ ತೀರ್ಮಾನ… BDA JK_Adv BDA Adv
Home Front Page ನ.13 ರಂದು ಒಂದೇ ದಿನ ಸರಳ ಹಂಪಿ ಉತ್ಸವ ಆಚರಣೆಗೆ ತೀರ್ಮಾನ…

ನ.13 ರಂದು ಒಂದೇ ದಿನ ಸರಳ ಹಂಪಿ ಉತ್ಸವ ಆಚರಣೆಗೆ ತೀರ್ಮಾನ…

ಬಳ್ಳಾರಿ,ನವೆಂಬರ್,9,2020(www.justkannada.in): ಕಲಾವಿದರ ವಿರೋಧದ ಮಧ್ಯೆ ಒಂದೇ ದಿನ ಹಂಪಿ ಉತ್ಸವ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.kannada-journalist-media-fourth-estate-under-loss

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ವಿಶ್ವ ವಿಖ್ಯಾತ ಹಂಪಿ ಉತ್ಸವ ನವೆಂಬರ್ 13 ರಂದು ಸರಳವಾಗಿ ನಡೆಯಲಿದೆ. ಇದಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಉಪಸಮಿತಿ ರಚನೆ ಮಾಡಿದೆ.Simple -Hampi Festival-celebration –one day –nov 13th.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮಗಳಿಲ್ಲದೇ ಕೇವಲ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹಾಗೂ ತುಂಗಾ ಆರತಿ ಮೂಲಕ ಉತ್ಸವ ನೆರವೇರಿಸಲಾಗುತ್ತಿದೆ.

ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ  ಸರ್ಕಾರಕ್ಕೆ 30 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Key words: Simple -Hampi Festival-celebration –one day –nov 13th.