ಮತದಾರರ ಗುರುತಿನ ಚೀಟಿ- ಆಧಾರ್ ಲಿಂಕ್ ಗಡುವು ವಿಸ್ತರಣೆ

ಬೆಂಗಳೂರು, ಮಾರ್ಚ್ 26, 2023 (www.justkannada.in): ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಲಿಂಕ್‌ ಮಾಡಲು ನೀಡಿರುವ ಗಡುವನ್ನು ವಿಸ್ತರಣೆ ಮಾಡಿದೆ.

ಆರಂಭದಲ್ಲಿ ಇವೆರಡು ಪ್ರಮುಖ ದಾಖಲೆಗಳನ್ನು ಲಿಂಕ್‌ ಮಾಡಲು ನೀಡಿದ್ದ ಅವಧಿಯು 2023ರ ಮಾರ್ಚ್‌ 31 ಕೊನೆಯಾಗಬೇಕಿತ್ತು.

ಆದರೀಗ ಆ ಗಡುವನ್ನು ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದ್ದು, 2024ರ ಮಾರ್ಚ್‌ 31 ಆಧಾರ್ ವೋಟರ್ ಐಡಿ ಲಿಂಕ್ ಕೊನೆಯ ದಿನವಾಗಿರುತ್ತದೆ.

ಆ ಮೂಲಕ ಮತದಾರರ ಗುರುತಿನ ಚೀಟಿದಾರರಿಗೆ ರಿಲೀಫ್‌ ನೀಡಲಾಗಿದೆ.

ಆದರೆ, ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜತೆ ಲಿಂಕ್‌ ಮಾಡುವುದು ಕಡ್ಡಾಯವಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.

ರಾಷ್ಟ್ರೀಯ ಮತದಾರರ ಸೇವೆಗಳ ಅಧಿಕೃತ ಪೋರ್ಟಲ್ nvsp.in ಭೇಟಿ ನೀಡಿ. ಹೋಮ್ ಪೇಜ್ ನಲ್ಲಿ “Search in Electoral Roll” ಆಯ್ಕೆಯನ್ನು ಆರಿಸಿ. ಬಳಿಕ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಅನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ. ಇದಾದ ಬಳಿಕ ನಿಮ್ಮ ಎರಡು ಐಡಿಗಳನ್ನೂ 10 ನಿಮಿಷಗಳೊಳಗಡೆ ಲಿಂಕ್ ಮಾಡಲಾಗುತ್ತದೆ.