ಸದ್ಯಕ್ಕೆ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ: ವಜಾಗೊಂಡಿದ್ಧ ನೌಕರರ ಮರು ನೇಮಕ- ಸಚಿವ ಬಿ.ಶ್ರೀರಾಮುಲು.

ಬೆಂಗಳೂರು,ಫೆಬ್ರವರಿ,10,2022(www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ನಡೆಸಿ ವಜಾಗೊಂಡಿದ್ಧ ಸಾರಿಗೆ ನೌಕರರನ್ನ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ಮಂದಿ ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಮುಷ್ಕರದಿಂದ 1610 ಮಂದಿ ಸಾರಿಗೆ ನೌಕರರು ಕೆಲಸ ಕಳೆದುಕೊಂಡಿದ್ದರು.  ಇದೀಗ 100 ನೌಕರರನ್ನ ಮರು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನಾಳೆ 200 ಮಂದಿ ಮರು ನೇಮಕ ಮಾಡಿಕೊಳ್ಳುತ್ತಿದ್ದೇವೆ.  ಮರು ನೇಮಕ ಮಾಡಿಕೊಳ್ಳಲು ಕಾನೂನಿಲ್ಲಿ ಅವಕಾಶ ಇಲ್ಲ.   ನಿಮ್ಮ ಕುಟುಂಬ ನೋಡಿ ನೇಮಕ ಮಾಡಿಕೊಳ್ಳುತ್ತಿದ್ದೇವೆ.

ಸಿಎಂ ಅಣತಿಯಂತೆ ನೇಮಕ ಮಾಡಿಕೊಂಡಿದ್ದೇವೆ  ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ  ಮತ್ತೆ ಮುಷ್ಕರ ಅಂದ್ರೆ ನಾನು ನಿಮ್ಮ ಜತೆ ನಿಲ್ಲಲ್ಲ.  ಮುಂದಿನ ತಿಂಗಳಿಂದ ಸರಿಯಾಗಿ ಸಂಬಳ ನೀಡುತ್ತೇವೆ ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಇನ್ನು ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಇಲ್ಲ. ವೋಲ್ವೋ ಬಸ್ ಪ್ರಯಾಣ ದರ ಇಳಿಕೆ ಮಾಡಲಾಗಿದೆ  ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words: Re-appointment–employees-Minister- B. Sriramulu.

ENGLISH SUMMARY…

No increase of bus ticket fares as of now: Suspended employees to return – Minister B. Sriramulu
Bengaluru, February 10, 2022 (www.justkannada.in): “Employees of the Karnataka State Road Transport Corporation (KSRTC) who got suspended after protesting against the State Government asking to fulfill their various demands are being reinstated. We are reinstating 100 employees today,” opined Transport Minister B. Sriramulu.
Speaking in Bengaluru today, he said, “About 1610 KSRTC employees had lost their jobs due to the protest. Today we are readmitting 100 of them and tomorrow 200 more will be reinstated. Though there is no provision of readmission, we are doing so looking at your families,” he explained.
“We are reinstating the suspended KSRTC employees following instructions from the Chief Minister. I request you not to do so in the future. If it repeats I won’t stand by you. We will start giving salaries properly from next month and try to solve all the problems,” he added.
Replying to a question on the possibility of an increase in bus ticket fare he informed me that there are no plans as of now. “Ticket fares of Volvo buses have been increased already,” he said.
Keywords: Transport Minister/ B. Sriramulu/ KSRTC employees/ suspended/ reinstate