ಅಮ್ಮನ ಮಡಿಲಲ್ಲಿ ‘ಸಲ್ಲು ಭಾಯ್’: ಸೆಲ್ಫಿ ಮೆಚ್ಚಿದ ಫ್ಯಾನ್ಸ್

ಬೆಂಗಳೂರು, ಫೆಬ್ರವರಿ 10, 2022 (www.justkannada.in): ನಟ ಸಲ್ಮಾನ್ ಖಾನ್ ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ್ದಾರೆ.

ಹೌದು. ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಈ ಫೋಟೋ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ‘ತಾಯಿಯ ಮಡಿಲು.. ಸ್ವರ್ಗ’ ಎಂಬ ಅರ್ಥದ ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಚಿತ್ರಕ್ಕೆ ಅವರ ಅನುಯಾಯಿಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿವೆ.