Saturday, September 12, 2026

BDA Apartments

ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್ ವಿರುದ್ಧ FIR ದಾಖಲಿಸಲು ಸೂಚನೆ! BD...
Home Crime ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್  ವಿರುದ್ಧ FIR ದಾಖಲಿಸಲು ಸೂಚನೆ!

ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್  ವಿರುದ್ಧ FIR ದಾಖಲಿಸಲು ಸೂಚನೆ!

🔴 Breaking News | Mysuru FIR ordered against Vice-Chancellor Mysuru: The Karnataka State Commission for Scheduled Castes & Scheduled Tribes has directed police to file an FIR against the Vice-Chancellor and other university officials over alleged caste-based harassment of a Dalit student.

 

ಮೈಸೂರು, ಏ.೧೭, ೨೦೨೬ : ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ, ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ, ಕುಲಪತಿ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ FIR ದಾಖಲಿಸಲು ಆಯೋಗ ಆದೇಶಿಸಿದೆ. ಏ.16 ರಂದು ಈ ಸಂಬಂಧ ಜಯಲಕ್ಷ್ಮಿ ಪುರಂ ಠಾಣಾ ಪೊಲೀಸರಿಗೆ ಪತ್ರ ಬರೆಯಲಾಗಿದೆ.

ಏನಿದು ಘಟನೆ:

ಬ್ರೇಕಿಂಗ್ ನ್ಯೂಸ್ mysore university 1

ಅರ್ಜಿದಾರ ಕಾರ್ತಿಕ್ ಜಿ.ಎನ್ ನೀಡಿದ ದೂರಿನ ಆಧಾರದ ಮೇಲೆ, ಕುಲಪತಿ  ಮತ್ತು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಜಾತಿ ಆಧಾರಿತ ಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನ್ಯಾಯ ಕೇಳಲು ಹೋದ ವಿದ್ಯಾರ್ಥಿಗೆ ಅವಮಾನಕಾರಿ ವರ್ತನೆ, ಮಾನಸಿಕ ಹಿಂಸೆ, ಜೊತೆಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಆರೋಪಗಳು ಕೂಡ ದಾಖಲಾಗಿದೆ.

ದೂರು ನೀಡಲು ಹೋದಾಗ ಪೊಲೀಸರು ಸಹ ಸರಿಯಾದ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಹೊರಬಂದಿದೆ.

 ಆಯೋಗದ ಕಠಿಣ ಆದೇಶ:

ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸೇರಿದಂತೆ  ಡಾ. ಎಂ. ಸುರೇಶ್ ಬೆಂಜಮೀನ್, ಪ್ರೊ. ಆರ್.ಎಸ್. ಉಮಾಕಾಂತ್ ಹಾಗೂ ಅಶ್ವಥ್ ಪ್ರಸಾದ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಅಡಿಯಲ್ಲಿ ತಕ್ಷಣ FIR ದಾಖಲಿಸಲು ಜಯಲಕ್ಷ್ಮೀಪುರಂ ಪೊಲೀಸರಿಗೆ ಸೂಚನೆ ನೀಡಲಾಗಿದೆ.

FIR ಪ್ರತಿಯನ್ನು ಕೂಡಲೇ ಆಯೋಗಕ್ಕೆ ಸಲ್ಲಿಸಲು ಪತ್ರದಲ್ಲಿ ಸೂಚನೆ ನೀಡಲಾಗಿದೆ.

UOM ಕುಲಪತಿ ಪ್ರೊ.ಲೋಕನಾಥ್ ವಿರುದ್ಧ FIR ದಾಖಲಿಸಲು ಸೂಚನೆ! police police 2

 ಶಿಕ್ಷಣ ಸಂಸ್ಥೆಯಲ್ಲೇ ಜಾತಿ ಹಿಂಸೆ?

ಈ ಘಟನೆ ರಾಜ್ಯದ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಅಧಿಕಾರಿಗಳ ವಿರುದ್ಧ ಮುಂದಿನ ಕಾನೂನು ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.

Key words: The Karnataka State Commission for Scheduled Castes & Scheduled Tribes, FIR ,  Vice-Chancellor, Mysore, harassment, Dalit student.

SUMMARY: 

🔴 Breaking News | Mysuru FIR ordered against Vice-Chancellor

Mysuru: The Karnataka State Commission for Scheduled Castes & Scheduled Tribes has directed police to file an FIR against the Vice-Chancellor and other university officials over alleged caste-based harassment of a Dalit student.

👉 Based on a complaint by Karthik G.N, officials allegedly subjected him to mental harassment and prevented him from writing exams.

ಬ್ರೇಕಿಂಗ್ ನ್ಯೂಸ್ | UOM ಕುಲಪತಿ ಪ್ರೊ.ಲೋಕನಾಥ್ ವಿರುದ್ಧ FIR ದಾಖಲಿಸಲು ಸೂಚನೆ! uom

👉 The Commission has ordered action under the SC/ST (Prevention of Atrocities) Act.

📌 Police have been asked to register the FIR immediately and submit a report.

#BreakingNews #Mysuru #SCSTAct #DalitIssue