Sunday, August 23, 2026

BDA Apartments

Home Cinema ಹಿರಿಯ ನಟ ಜಯಕುಮಾರ್ ಅಸ್ವಸ್ಥ: ಚಿಕಿತ್ಸೆಗೆ ಹಣವಿಲ್ಲದೇ ಕಂಗಾಲಾದ ಕುಟುಂಬ

ಹಿರಿಯ ನಟ ಜಯಕುಮಾರ್ ಅಸ್ವಸ್ಥ: ಚಿಕಿತ್ಸೆಗೆ ಹಣವಿಲ್ಲದೇ ಕಂಗಾಲಾದ ಕುಟುಂಬ

ಬೆಂಗಳೂರು, ಅಕ್ಟೋಬರ್, 2019 (www.justkannada.in): ಹಿರಿಯ ಕಲಾವಿದ ಜಯಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆಗೆ ಹಣ ಸಾಲದ ಹಿನ್ನೆಯಲ್ಲಿ ನೆರವಿಗೆ ಪತ್ನಿ ಪದ್ಮಾವತಿ ಹಾಗೂ ಪುತ್ರ ಮಾರುತಿ ಮನವಿ ಮಾಡಿಕೊಂಡಿದ್ದಾರೆ. ಜಯಕುಮಾರ್ ರವರು ಒಂದು ತಿಂಗಳ ಹಿಂದೆ ಕಲಬುರಗಿಯಲ್ಲಿ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು.

ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಎರಡನೇ ಬಾರಿ ಹೃದಯಾಘಾತವಗಿದೆ. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕುಟುಂಬದವರು ಕಂಗಾಲಾಗಿದ್ದಾರೆ.