ಲಸಿಕೆ ಸಂಶೋಧನೆ  ಭಾರತದ ದಕ್ಷತೆ, ಪ್ರತಿಭೆಗೆ ಸಾಕ್ಷಿ – ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ …

ನವದೆಹಲಿ,ಜನವರಿ,16,2021(www.justkannada.in):  ಬಹಳ ಕಡಿಮೆ ಸಮಯದಲ್ಲಿ ಕೊರೊನಾ ಲಸಿಕೆ  ಕಂಡು ಹಿಡಿದಿದ್ದಾರೆ. ಲಸಿಕೆ ಸಂಶೋಧನೆ  ಭಾರತದದ ದಕ್ಷತೆ ಪ್ರತಿಭೆಗೆ ಸಾಕ್ಷಿ. ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ   ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನಕ್ಕೆ ಆನ್’ಲೈನ್ ಮೂಲಕ ಚಾಲನೆ ನೀಡಿದರು. ಇದರಿಂದ ಇಡೀ ವಿಶ್ವವನ್ನೇ ಕಾಡಿದ ಕೊರೋನಾ ಸೋಂಕು ನಿಯಂತ್ರಣಕ್ಕೆ ಒಂದೇ ವರ್ಷದಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.jk-logo-justkannada-mysore

ಮೊದಲ ದಿನ ದೇಶದ 3006 ಲಸಿಕಾ ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದೆ. ಲಸಿಕೆ ಚಾಲನೆ ನೀಡಿದ ಬಳಿಕ ಮೋದಿಯವರು ಜನಸಾಮಾನ್ಯರು ಲಸಿಕೆ ಪಡೆಯಲು ಕಡ್ಡಾಯವಾಗಿರುವ ಕೋ-ವಿನ್ ಆಯಪ್’ಗೂ ಚಾಲನೆ ನೀಡಿದ್ದಾರೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ. ಕೊರೋನಾ ಲಸಿಕೆ ಬಂದಾಗಿದೆ. ಬಹಳ ಕಡಿಮೆ ಸಮಯದಲ್ಲಿ ಕೊರೊನಾ ಲಸಿಕೆ  ಕಂಡು ಹಿಡಿದಿದ್ದಾರೆ.  ಎರಡು ಸ್ವದೇಶಿ ಲಸಿಕೆಯನ್ನ ಅಭಿವೃದ್ಧಿ ಪಡಿಸಿದ್ದಾರೆ. ಹಗಲು ರಾತ್ರಿ ಎನ್ನದೇ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.  ದೇಶದ ಜನತೆಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮನುಷ್ಯ ಪರಿಶ್ರಮ ಹಾಕಿದರೇ ಕಲ್ಲುಕೂಡ ನೀರಾಗುತ್ತದೆ. ಮೊದಲು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಮೊದಲ ಹಕ್ಕುದಾರರು.  ಬಳಿಕ ಪೊಲೀಸರು ಯೋಧರು ಅಗ್ನಿಶಾಮಕದಳ, ಸಫಾಯಿ ಕರ್ಮಚಾರಿಗಳಿಗೆ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಫ್ರಂಟ್ ಲೈನ್  3ಕೋಟಿ ಕಾರ್ಯಕರ್ತರಿದ್ದಾರೆ ಅವರಿಗೆಲ್ಲಾ ಕೇಂದ್ರ ಸರ್ಕಾರ ಉಚಿತ ಕೊರೋನಾ ಲಸಿಕೆ ನೀಡುತ್ತದೆ.  ಎರಡು ಡೋಸ್ ಪಡೆಯುವುದು ಅವಶ್ಯಕ. ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದಿರುವುದು ಸರಿಯಲ್ಲ. ಎಂದರು.vaccine-research-evidence-indias-talent-pm-modi-drive-coronavirus-campaign

ಇಷ್ಟು ದೊಡ್ಡ ಮಟ್ಟದ ಅಭಿಯಾನ ಎಂದೂ ನಡೆಸಿಲ್ಲ. ಲಸಿಕೆ ವಿರುದ್ಧ ಅಪಪ್ರಚಾರವನ್ನ ನಂಬಬೇಡಿ. ಲಸಿಕೆ ಪಡೆದ ಬಳಿಕವೂ ಕೊರೋನಾ ನಿಯಮ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ENGLISH SUMMARY….

Invention of Corona vaccination is a proof of India’s efficiency – PM Narendra Modi
New Delhi, Jan. 16, 2021 (www.justkannada.in): “Scientists have invented Corona vaccination in such a short time. It is proof of our country’s efficiency and talent. I congratulate and thank all the scientists who have made it possible,” opined Prime Minister Narendra Modi.
The Prime Minister launched the world’s largest Corona vaccination campaign today virtually. Thus India has taken the first step forward in preventing Corona that has haunted the entire world.vaccine-research-evidence-indias-talent-pm-modi-drive-coronavirus-campaign
About 3 lakh health workers will receive the first dose of vaccination through 3006 vaccination booths across the country on the first day. The Prime Minister also launched the Co-Win app which has been made compulsory for the people to avail the vaccination.
Keywords: Corona vaccination/ Prime Minister Narendra Modi/ Vaccination research proof of our efficiency

Key words: Vaccine- research – evidence – India’s -talent -PM Modi- drive-coronavirus campaign