ಸಂಪೂರ್ಣ ವಿಶ್ವಾಸದಿಂದ ಕೋವಿಡ್ ಲಸಿಕೆ ತೆಗೆದುಕೊಳ್ಳಿ- ಆರೋಗ್ಯ ಸಚಿವ ಡಾ.ಕೆ ಸುಧಾಕರ್…

ಬೆಂಗಳೂರು,ಜನವರಿ,16,2021(www.justkannada.in):  ಒಂದೇ ವರ್ಷದಲ್ಲಿ ನಮ್ಮ ವಿಜ್ಞಾನಿಗಳು ಕೊರೋನಾಗೆ ಲಸಿಕೆ ಕಂಡು ಹಿಡಿದಿದ್ದಾರೆ. ಇದು ಹೆಮ್ಮೆಯ ವಿಚಾರ. ಸಂಪೂರ್ಣ ವಿಶ್ವಾಸದಿಂದ ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk-logo-justkannada-mysore

ಕೊರೊನಾ ಲಸಿಕೆ ಆಂದೋಲನ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಕೆಲ ವ್ಯಾಕ್ಸಿನ್ ಕಂಡು ಹಿಡಿಯಲು 9 ವರ್ಷ ಬೇಕಾಗುತ್ತದೆ. ಕೆಲ ವ್ಯಾಕ್ಸಿನ್ ಗೆ 25 ವರ್ಷ ತೆಗೆದುಕೊಂಡಿದ್ದಾರೆ. ಆದರೆ ನಮ್ಮ ವಿಜ್ಞಾನಿಗಳು ಕೊರೊನಾಗೆ ಒಂದೇ ವರ್ಷದಲ್ಲಿ ಲಸಿಕೆ ಕಂಡು ಹಿಡಿದಿದ್ದಾರೆ. ಇದು ಹೆಮ್ಮೆಯ ವಿಚಾರ. ಈ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್ ವೈ ಅಭಿನಂದಿಸುತ್ತೇನೆ ಎಂದರು.Take -Kovid vaccine – complete- confidence- Health Minister-Sudhakar.

ದೇಶದಲ್ಲಿ ಏಕಕಾಲದಲ್ಲಿ ಕೊರೋನಾ ಲಸಿಕೆ ಆಂದೋಲನ ನಡೆಯುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ, ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಇದೊಂದು ಐತಿಹಾಸಿಕ ಲಸಿಕೆ ಆಂದೋಲನವಾಗಿದ್ದು, ಸಂಪೂರ್ಣ ವಿಶ್ವಾಸದಿಂದ ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಸುಧಾಕರ್ ತಿಳಿಸಿದರು.

Key words: Take -Kovid vaccine – complete- confidence- Health Minister-Sudhakar.