ಮಲ್ಲೇಶ್ವರದಲ್ಲಿ ದಿನದ 24 ಗಂಟೆ ಸಿಗಲಿದೆ ಲಸಿಕೆ: ಏಕಕಾಲಕ್ಕೆ ಕ್ಷೇತ್ರದ 54 ಕಡೆ ವ್ಯಾಕ್ಸಿನೇಷನ್- ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್.

ಬೆಂಗಳೂರು,ಸೆಪ್ಟಂಬರ್,17,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಏಕಕಾಲಕ್ಕೆ 54 ಕಡೆ ಕೋವಿಡ್ ಲಸಿಕೀಕರಣ, 24/7 ಲಸಿಕಾ ಕೇಂದ್ರದ ಆರಂಭ ಸೇರಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳಿಗೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಶುಕ್ರವಾರ ಚಾಲನೆ ನೀಡಿದರು.

ವಿಶೇಷವೆಂದರೆ 54 ಕೇಂದ್ರಗಳಲ್ಲಿಯೂ ಲಸಿಕೀಕರಣ ಮಾಡುವ ಕಾರ್ಯ ಒಮ್ಮೆಲೆ ಆರಂಭವಾಯಿತು ಹಾಗೂ ಜನರು ಮಧ್ಯರಾತ್ರಿ ಬೇಕಾದರೂ ಬಂದು ಲಸಿಕೆ ಪಡೆಯುವ ಸೌಲಭ್ಯವುಳ್ಳ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ ಸ್ಥಾಪಿಸಲಾಗಿರುವ 24/7 ಕೋವಿಡ್ ಲಸಿಕಾ ಕೇಂದ್ರಕ್ಕೂ ಸಚಿವರು ಹಸಿರು ನಿಶಾನೆ ತೋರಿಸಿದರು.

ಶಾಲಾ ಮಕ್ಕಳಿಗೆ ಸೌಲಭ್ಯ ವಿತರಣೆ:

ಮೊದಲಿಗೆ ಕ್ಷೇತ್ರದ ವ್ಯಾಪ್ತಿಯ ಸರಕಾರಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಲ್ಯಾಪ್ ಟಾಪ್, ಟ್ಯಾಬ್, ಚಟುವಟಿಕೆ ಆಧರಿತ ಪುಸ್ತಕ ವಿತರಣೆ, ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಹಾಗೂ ಪ್ರೇರಣಾ ಆಪ್ ಲೋಕಾರ್ಪಣೆ ಕಾರ್ಯಕ್ರಮಗಳನ್ನು ಸಚಿವ ಅಶ್ವಥ್ ನಾರಾಯಣ್ ನೆರೆವೇರಿಸಿದರು.

ಪ್ರಾಥಮಿಕ ಶಾಲಾ ಮಕ್ಕಳಿಗೆ 350 ಲ್ಯಾಪ್ ಟಾಪ್ ಹಾಗೂ ಹೈಸ್ಕೂಲ್ ಮಕ್ಕಳಿಗೆ 1,000 ಟ್ಯಾಬ್ʼ ಗಳನ್ನು ವಿತರಿಸಿದ ಸಚಿವ ಅಶ್ವಥ್ ನಾರಾಯಣ್, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಇನ್ನಷ್ಟು ಉಪಕರಣಗಳನ್ನು ಕೊಡುತ್ತಾ ಹೋಗುತ್ತೇವೆ. ಡಿಜಿಟಲ್ ಕಲಿಕೆ ಉದ್ದೇಶದಿಂದ ಎಲ್ಲ ಶಾಲೆಗಳಲ್ಲಿ ಸ್ವಾರ್ಟ್ ಕ್ಲಾಸ್ ರೂಂಗಳನ್ನು ಮಾಡಲಾಗುತ್ತಿದೆ.

ಅಕ್ಟೋಬರ್ 7ಕ್ಕೆ ಪ್ರಧಾನಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಇಪ್ಪತ್ತು ವರ್ಷ ಆಗುತ್ತದೆ. ಇಂದಿನಿಂದ ಅಂದಿನವರೆಗೂ ಈ ಸೇವಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಮೋದಿ ಅವರ ಪ್ರೇರಣೆಯೊಂದಿಗೆ ನಾವೆಲ್ಲ ಒಳ್ಳೆಯ ಕೆಲಸ ಮಾಡೋಣ. ಈ ಉದ್ದೇಶಕ್ಕಾಗಿ 30 ಕಡೆ ನಮೋ ಆಪ್ ಡೌನ್ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು  ಅಶ್ವಥ್ ನಾರಾಯಣ್ ಹೇಳಿದರು.

ಮಧ್ಯರಾತ್ರಿ ಬಂದರೂ ಲಸಿಕೆ:

ಕ್ಷೇತ್ರದ ವ್ಯಾಪ್ತಿಯ ಕೋದಂಡರಾಮಪುರದ ಕಬಡ್ಡಿ ಮೈದಾನದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರಕ್ಕೂ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

ದಿನದ 24 ಗಂಟೆ, ವಾರದ 7 ದಿನ ಕಾರ್ಯ ನಿರ್ವಹಿಸುವ ಈ ಕೇಂದ್ರದಲ್ಲಿ ಮಧ್ಯರಾತ್ರಿ ಬಂದರೂ ಲಸಿಕೆ ನೀಡುವ ವ್ಯವಸ್ಥೆ ಇದೆ ಎಂದ ಅವರು, ಇದೊಂದು ವಿಭಿನ್ನ ಪ್ರಯೋಗ. ದೇಶಾದ್ಯಂತ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಲಸಿಕೀಕರಣದ ಅಂಗವಾಗಿ ಬೆಂಗಳೂರು ನಗರದಲ್ಲೂ ಇಂಥ ಲಸಿಕಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.

ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲ, ಮಧ್ಯರಾತ್ರಿ ಬಂದರೂ ನಾವು ಈ ಕೇಂದ್ರದಲ್ಲಿ ಲಸಿಕೆ ನೀಡುತ್ತೇವೆ. ಮೂರು ತಿಂಗಳು ಕಾಲ ಈ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಅಗತ್ಯವಾದರೆ ಅದರ ಸೇವೆಯನ್ನು ಮತ್ತಷ್ಟು ದಿನ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕೇರ್ ಇಂಡಿಯಾ ಸಂಸ್ಥೆಯವರು ಈ ಲಸಿಕಾ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯ ಒದಗಿಸಿದ್ದಾರೆ. ಬಹಳ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಲಸಿಕೆ ಪಡೆದ ನಂತರ ಅರ್ಧ ಗಂಟೆ ಇಲ್ಲಿಯೇ ಉಳಿಯುವವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ್ ಹೇಳಿದರು.

ಮಹಿಳೆಯರಿಗೆ ಪಿಂಕ್ ಬೂತ್:

24/7 ಲಸಿಕೆ ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಪ್ರತ್ಯೇಕ ಪಿಂಕ್ ಬೂತ್ ಮಾಡಲಾಗಿದ್ದು. ಗರ್ಭಿಣಿಯರು, ಚಿಕ್ಕ ಮಕ್ಕಳ ತಾಯಂದಿರು ಯಾರೇ ಬಂದರೂ ಅವರು ಲಸಿಕೆ ಪಡೆದು ಕೆಲವೊತ್ತು ಇಲ್ಲಿಯೇ ಇರುವ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಟಿವಿ, ಪತ್ರಿಕೆ, ಮ್ಯಾಗಝಿನ್ʼಗಳನ್ನು ಇಡಲಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ವಾಹನದಲ್ಲೇ ಲಸಿಕೆ:

ವಯಸ್ಸಾದವರು, ನಡೆಯಲು ಅಶಕ್ತರಾದವರಿಗೆ ಅನುಕೂಲವಾಗಲೆಂದು ಕಾರಿನಲ್ಲಿ‌ ಕೂರಿಸಿ ಲಸಿಕೆ ನೀಡುವ ವ್ಯವಸ್ಥೆ ‌ಕೂಡ‌ ಇಲ್ಲಿ ಮಾಡಲಾಗಿದೆ. ಲಸಿಕಾ ಕೇಂದ್ರಕ್ಕೆ ನೇರವಾಗಿ ವಾಹನದಲ್ಲಿಯೇ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದು. ಇದು ವಿಶೇಷ ವಾದ ಕ್ರಮ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಮೊದಲ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರೂ ಹಾಗೂ ಪರಿಷತ್ತಿನ ಮುಖ್ಯ ಸಚೇತಕರಾದ ಮಹಂತೇಶ ಕವಟಗಿಮಠ, ಶಿಕ್ಷಣ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಶಿಕ್ಷಣ ಫೌಂಡೇಶನ್ ಸಿಇಒ ಪ್ರಸನ್ನ, ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಐ ನಾರಾಯಣ್, ಮಲ್ಲೇಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಬಿಜೆಪಿ ಮಲ್ಲೇಶ್ವರ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ, ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಮುಂತಾದವರು ಇದ್ದರು.

ಲಸಿಕಾ ಕೇಂದ್ರ ಉದ್ಘಾಟನೆ ಕಾರ್ಯಕ್ರದಲ್ಲಿ ಸಚಿವರ ಜತೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ, ಪಶ್ಚಿಮ ವಿಭಾಗದ ಆಯುಕ್ತ ಬಸವರಾಜ್, ಪಾಲಿಕೆಯ ಮಾಜಿ ಸದಸ್ಯ ಮಂಜುನಾಥ್, ಕೇರ್ ಇಂಡಿಯಾ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಇದ್ದರು.

Key words: vaccine – available  -24 hours –Malleswaram- Minister -Dr. C.N. Ashwath Narayan

ENGLISH SUMMARY…

20 days of service activity kicks off on PM’s birthday
1000 tabs, 350 laptops handed over to govt./BBMP schools to strengthen digital education in Malleshwaram

Bengaluru: On the occasion of celebrating Prime Minister Narendra Modi’s birthday, to strengthen digital education along the lines of the National Education Policy (NEP-2020), 1000 tabs and 350 laptops were handed over to government/BBMP schools in the Malleshwaram constituency on Friday.

In the constituency represented by Dr.C.N.Ashwatha Narayana, the minister for Higher Education and IT/Bt and S&T, the day also witnessed activity-based books being distributed, launching of smart boards, and inauguration of Prerana App which facilitates the teaching-learning process.

Speaking on the occasion, Narayana, who presided over the function told, “we are fortunate to have a leader like Narendra Modi who is leading the country by giving suitable prominence to all the sectors including education and technology.” Prime Minister has brought in the National Education Policy with the aim of making India ‘vishwaguru’ in the coming years, he added.

Mahantesh Kavatagimutt, MLC and Chief Whip of the legislative Council addressed as a chief guest and appreciated the efforts, the Higher Education Minister has put towards the implementation of the NEP.

Tabs were given to be used by high school students and laptops are meant to be used by primary school students (in the proportion of 1 laptop for every 5 students). Dr.Narayan also informed these will be further added depending on the increase in the number of students. The Minister also expressed thanks to the organizations and institutions who have contributed the equipment for the cause of education.

Prasanna, CEO, Shikshana Foundation, Dr. Prashanth Prakash, Chairperson, State Startup Vision Group & President, Shikshana Foundation, Narayan, DDPI, Umadevi, BEO, Kaveri Kedarnath, Chairperson, BJP Malleshwaram Mahila Mandal, Jayaprakash, Ex- corporator, and others were present.