Sunday, August 9, 2026

BDA Apartments

Home Front Page ಸೋಮಣ್ಣ ಯಾವ ಪಕ್ಷಕ್ಕೂ ಹೋಗಲ್ಲ; ನಮ್ಮ ಜತೆಯೇ ಇರ್ತಾರೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಸೋಮಣ್ಣ ಯಾವ ಪಕ್ಷಕ್ಕೂ ಹೋಗಲ್ಲ; ನಮ್ಮ ಜತೆಯೇ ಇರ್ತಾರೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಶಿವಮೊಗ್ಗ,ಡಿಸೆಂಬರ್,6,2023(www.justkannada.in):  ಮಾಜಿ ಸಚಿವ ವಿ.ಸೋಮಣ್ಣ ಯಾವ ಪಕ್ಷಕ್ಕೂ ಹೋಗಲ್ಲ.  ನಮ್ಮ ಜತೆಯೇ ಇರುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಬಿಎಸ್ ವೈ, ಸೋಮಣ್ಣ ಎಲ್ಲೂ ಹೋಗಲ್ಲ, ತಮ್ಮ ಪಕ್ಷದಲ್ಲೇ ಇರುತ್ತಾರೆ, ತಾನು ಅವರೊಂದಿಗೆ ಮಾತಾನಾಡುತ್ತೇನೆ ಎಂದರು.

ಬರ ಪರಿಹಾರ ನಿಧಿ ಇನ್ನೂ ಕೇಂದ್ರದಿಂದ ಬಿಡುಗಡೆ ಮಾಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ಸಂಸದರು ಕೇಂದ್ರದ ನಾಯಕರನ್ನು ಭೇಟಿಯಾಗಿದ್ದಾರೆ, ವಿಜಯಯೇಂದ್ರ ಸಹ ಅವರೊಂದಿಗೆ ಮಾತಾಡಿದ್ದಾರೆ, ಆದಷ್ಟು ಬೇಗ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದರು.

ಆದರೆ ರಾಜ್ಯ ಸರ್ಕಾರ ಪರಿಹಾರ ನಿಧಿ ನಿರೀಕ್ಷೆಯಲ್ಲಿ ಕೈಕಟ್ಟಿ ಕುಳಿತಿಕೊಳ್ಳಬಾರದು, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಬಿಎಸ್ ವೈ ಆಗ್ರಹಿಸಿದರು.

Key words: V. Somanna -does not go – any party-Former CM- BS Yeddyurappa