ವಿಶ್ವಸಂಸ್ಥೆ ಚೀನಾ ಕೈಗೊಂಬೆ: ಟ್ರಂಪ್ ವಾಗ್ದಾಳಿ

ವಾಷಿಂಗ್ಟನ್, ಮೇ 19, 2020 (www.justkannada.in): ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕಾ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ತಾವು ವಿಶ್ವಸಂಸ್ಥೆಗೆ ನೀಡುತ್ತಿದ್ದ ಅನುದಾನ ಕಡಿತದ ಬಗ್ಗೆಯೂ ಮಾತನಾಡಿದ್ದಾರೆ.

ಚೀನಾ ಕೈಗೊಂಬೆಯಾಗಿ ವಿಶ್ವಸಂಸ್ಥೆ ನಡೆದುಕೊಳ್ಳುತ್ತಿದೆ. ಚೀನಾ ಹೇಳಿದ ರೀತಿ ವಿಶ್ವಸಂಸ್ಥೆ ಕೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಕೊವಿಡ್ ಹರಡಿದ್ದು ಚೀನಾದಿಂದಲೇ ಎನ್ನುವುದು ಗೊತ್ತಿದೆ. ಆದರೂ ಚೀನಾ ಪರವಾಗಿಯೇ ವಿಶ್ವಸಂಸ್ಥೆ ಮಾತನಾಡುತ್ತದೆ ಎಂದು ಆರೋಪಿಸಿದ್ದಾರೆ.

ನಾವು ಅವರಿಗೆ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಬೇಕು ಎಂದುಕೊಂಡಿದ್ದೇವೆ. ವಿಶ್ವಸಂಸ್ಥೆ ಗೆ ಅಮೆರಿಕಾ 3.4 ಸಾವಿರ ಕೋಟಿ ಹಣವನ್ನು ನೀಡುತ್ತಿದೆ. ಇದನ್ನು 300 ಕೋಟಿಗೆ ಇಳಿಸಲು ಚಿಂತಿಸಲಾಗಿದೆ‌.