Sunday, October 18, 2026

Dasara Wishes

Happy Dasara
Home Front Page ಭಾರತದಲ್ಲಿ ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ, ಮೇ 19, 2020 (www.justkannada.in): ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 3,160 ದಾಟಿದ್ದು. ಸೋಂಕು ಪೀಡಿತರ ಸಂಖ್ಯೆ 1,01,139ಕ್ಕೇರಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 134 ಸಾವುಗಳು ಮತ್ತು4,970 ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 134 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 51,ಗುಜರಾತ್‍ನಲ್ಲಿ 35,ಉತ್ತರ ಪ್ರದೇಶ 14, ದೆಹಲಿ 8, ರಾಜಸ್ತಾನ 7, ಪಶ್ಚಿಮ ಬಂಗಾಳ 6, ಮಧ್ಯಪ್ರದೇಶ 4, ತಮಿಳುನಾಡು 3, ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ತಲಾ 2, ಹಾಗೂ ಬಿಹಾರ ಮತ್ತುತೆಲಂಗಾಣ ತಲಾ ಒಂದು ಸಾವು ಪ್ರಕರಣ ವರದಿಯಾಗಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ3,163ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1,10,139ತಲುಪಿದೆ. ಇಂದು ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ1.15 ಲಕ್ಷದಾಟುವ ಆತಂಕವೂ ಇದೆ.