Wednesday, October 7, 2026

BDA Apartments

ನಟಿ ‘ಕೃಷಿ ತಾಪಂಡ’ ಮನೆಯಲ್ಲಿ ಸ್ನೇಹಿತ ಆತ್ಮಹತ್ಯೆಗೆ ಶರಣು BDA JK_Adv BDA Adv
Home Front Page ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಕೊರೊನಾ ಸೋಂಕು

ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಕೊರೊನಾ ಸೋಂಕು

ನವದೆಹಲಿ, ಮೇ 19, 2020 (www.justkannada.in): ಜೀ ಸುದ್ದಿ ವಾಹಿನಿಯ 28 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಜೀ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಸುಧೀರ್ ಚೌದರಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಇದು ಅತ್ಯಂತ ಕಷ್ಟದ ಸಮಯ ನಮ್ಮ 28 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ಗೆ ಅಂಜದೇ ಕಾರ್ಯನಿರ್ವಹಿಸುತ್ತಿದ್ದ ಇವರ ವೃತ್ತಿಪರತೆಯನ್ನು ಮೆಚ್ಚಲೇಬೇಕು. ಅವರೆಲ್ಲ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೀ ಮಾಧ್ಯಮ ಸಂಸ್ಥೆಯಲ್ಲಿ 2500 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ತಪಾಸಣೆ ಹಾಗೂ ಮುನ್ನೆಚ್ಚರಿಕೆಯನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ಜೀ ಮಿಡಿಯಾ ಕೋವಿಡ್‌ಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.