ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ

 

ಬೆಂಗಳೂರು, ಅ.29, 2020 : (www.justkannada.in news) ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000 ಪ್ರಕರಣ 14(2) ರ ಉಪಬಂಧಗಳನುಸಾರ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯ.

jk-logo-justkannada-logo

1 ಉನ್ನತ ಮಟ್ಟದ ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಸಾಮರ್ಥ್ಯ, ಪ್ರಾಮಾಣಿಕತೆ, ಸಮಗ್ರತೆ | ಋಜುತ್ವ
ನೈತಿಕ ಮೌಲ್ಯಗಳನ್ನು ಹಾಗೂ ಸಾಂಸ್ಥಿಕ ಬದ್ಧತೆಯನ್ನು ಹೊಂದಿರತಕ್ಕದು.

1. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ಅಥವಾ ವಿಖ್ಯಾತ ಸಂಶೋಧನಾ ಆಥವಾ ಶೈಕ್ಷಣಿಕ ಆಡಳಿತ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳು ಕಾರ್ಯನಿರ್ವಹಿಸಿದ ಅನುಭವವನ್ನು ಹಾಗೂ ರುಜುವಾತದ ಶೈಕ್ಷಣಿಕ ಅಗ್ರಗಾಮಿತ್ವವನ್ನು ಹೊಂದಿರತಕ್ಕದ್ದು;

ii, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಯು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000 ರ ಪ್ರಕರಣ 14(5) ಹಾಗೂ ಪ್ರಕರಣ 14(6) ರಲ್ಲಿ ನಿಯಮಿಸಿರುವಂತೆ, 4 ವರ್ಷಗಳು ಆಥವಾ 67 ವರ್ಷಗಳ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಕುಲಾಧಿಪತಿಗಳ ಇಷ್ಟಪರ್ಯಂತ ಪದಧಾರಣಾವಧಿಯನ್ನು ಹೊಂದಿರುತ್ತಾರೆ. ಆದುದರಿಂದ ಕುಲಾಧಿಪತಿಗಳ ಇಷ್ಟಪರ್ಯಂತ 4 ವರ್ಷಗಳ ಪದಧಾರಣಾವಧಿಯ ಅವಕಾಶವಿರುವ ವಯೋಮಿತಿಯನ್ನು ಹೊಂದಿರತಕ್ಕದ್ದು.

Bangalore-vc-appointed-notification-vice.chancellor-ugc

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗೆ ಉಮೇದುವಾರಿಕೆ ಸಲ್ಲಿಸಬಯಸುವ ಆಸಕ್ತರು
ತಮ್ಮ ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವಗಳು, ಸಾಧನೆಗಳು ಹಾಗೂ ಇತರೆ
ವಿವರಗಳನ್ನು ಯುಜಿಸಿಯಿಂದ ನಿಗದಿಪಡಿಸಲಾಗಿರುವ ನಮೂನೆಯಲ್ಲಿ ಭರ್ತಿ ಮಾಡಿ ಮುದ್ರಿತ ಅರ್ಜಿಗಳನ್ನು
ಪ್ರತಿಗಳಲ್ಲಿ ಈ ನೇಮಕಾತಿ ಜಾಹೀರಾತು ಪ್ರಕಟಣೆಯಾದ 15 ದಿನಗಳ ಒಳಗಾಗಿ ಸ್ವೀಕೃತವಾಗುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು- 560 001 ಇವರಿಗೆ ಸಲ್ಲಿಸತಕ್ಕದ್ದು.

oooo

key words : Bangalore-vc-appointed-notification-vice.chancellor-ugc