Monday, September 21, 2026

BDA Apartments

ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ- ಸಂಸದ ಶ್ರೀನಿವಾಸ್ ಪ್ರಸಾದ್ ಹೀಗೆ ಹೇಳಿದ...
Home Front Page ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ- ಸಂಸದ ಶ್ರೀನಿವಾಸ್ ಪ್ರಸಾದ್ ಹೀಗೆ ಹೇಳಿದ್ದು ಯಾರಿಗೆ ಗೊತ್ತೆ…?

ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ- ಸಂಸದ ಶ್ರೀನಿವಾಸ್ ಪ್ರಸಾದ್ ಹೀಗೆ ಹೇಳಿದ್ದು ಯಾರಿಗೆ ಗೊತ್ತೆ…?

ಮೈಸೂರು,ಆ,23,2019(www.justkannada.in): ಸಮ್ಮಿಶ್ರ ಸರ್ಕಾರ ಪತನ ಕುರಿತು ಸಿದ್ದರಾಮಯ್ಯ ಮೇಲೆ ಹೆಚ್.ಡಿ ದೇವೇಗೌಡರು, ಹೆಚ್.ಡಿ ದೇವೇಗೌಡರ ಮೇಲೆ ಸಿದ್ಧರಾಮಯ್ಯ ಆರೋಪಿಸಿಕೊಂಡಿದ್ದರು.  ಇದೀಗ ಈ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯನು ಅಷ್ಟೇ ದೇವೇಗೌಡರು ಅಷ್ಟೇ. ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ. ಸಿದ್ದರಾಮಯ್ಯನು ಬೆನ್ನಿಗೆ ಚೂರಿ ಹಾಕಿನೆ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪರಾಣೆ ಇಟ್ಟುಕೊಂಡು ಮಾತನಾಡಿದ್ರು. ಲೋಕಸಭೆಯಲ್ಲಿ ಬಾಯಿ ಬಾಯಿ ಅಂತ ಅಕ್ಕಪಕ್ಕದಲ್ಲಿ ಕುಳಿತುಕೊಂಡರು. ಕಳೆದ ಮೂರುದಿನದಿಂದ ಒಬ್ಬರ ಮೇಲೋಬ್ಬರು ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಜನ ಎಲ್ಲವನ್ನು ನೋಡ್ತಿದ್ದಾರೆ. ಇವರನ್ನ ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೀರ ಈಗಲಾದ್ರು ಗಂಭೀರವಾಗಿ ಇರೋದನ್ನ ಕಲಿರಿ ಎಂದು ಸಲಹೆ ನೀಡಿದರು.

ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ‌. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಎತ್ತಿ ಸಿಎಂರನ್ನ ಸಮರ್ಥಿಸಿಕೊಂಡಿದ್ದೇ ಸಿದ್ದರಾಮಯ್ಯನೇ ಅಲ್ವಾ. ಈಗ್ಯಾಕೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗಳನ್ನ ನೋಡ್ತಿದ್ರೆ ಜನರಿಗೆ ಅಸಹ್ಯವಾಗುತ್ತೆ. ಕರ್ನಾಟಕದ ಅಭಿವೃದ್ಧಿ ದೃಷ್ಠಿಯಿಂದ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿ. ವಿರೋಧ ಪಕ್ಷದಲ್ಲಿ ಕುಳಿತು ಗಂಭೀರವಾಗಿ ಕೆಲಸ ಮಾಡಿ ಎಂದು  ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

Key words: two –knife- back-MP Srinivas Prasad -mysore