ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಟ್ವಿಸ್ಟ್:  ಆದಿಲ್ ತಂದೆ ಮತ್ತು ಚಿಕ್ಕಪ್ಪರಿಂದ ದ್ವಂದ್ವ ಹೇಳಿಕೆ         

ದಾವಣಗೆರೆ, ಮೇ 25,2024 (www.justkannada.in):  ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಆರೋಪಿ ಆದಿಲ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಆದಿಲ್ ತಂದೆ ಖಲೀಮುಲ್ಲಾ ಮತ್ತು ಚಿಕ್ಕಪ್ಪ ಮೆಹಬೂಬ್ ಅಲಿ ದ್ವಂದ್ವ ಹೇಳಿಕೆ ನೀಡಿದ್ದಾರೆ.

ಪ್ರಕರಣ ಕುರಿತು ಮಾತನಾಡಿರುವ ಆದಿಲ್ ಚಿಕ್ಕಪ್ಪ ಮೆಹಬೂಬ್ ಅಲಿ,  ನನ್ನ ಪುತ್ರನ ಸಾವಿಗೆ ಪೊಲೀಸರೇ ಕಾರಣ. ಆದಿಲ್ ಬೆನ್ನಿಗೆ ಗಾಯ ಆಗಿದೆ, ಚರ್ಮ ಕೆಂಪಾಗಿರುವುದು ಕಂಡು ಬಂದಿದೆ. ನನ್ನ ಪುತ್ರ ಆದಿಲ್​ಗೆ​ ಮೂರ್ಛೆ ರೋಗ ಇಲ್ಲ ಎಂದು ಹೇಳಿದರು.

30 ವರ್ಷದಿಂದ ಆದಿಲ್ ​ನನ್ನು ನಾನೇ ಸಾಕಿದ್ದು, ಅವನಿಗೆ ಯಾವುದೆ ಕಾಯಿಲೆ ಇರಲಿಲ್ಲ. ವೈದ್ಯಕೀಯ ವರದಿ ಬರಲಿ, ಸತ್ಯ ಗೊತ್ತಾಗುತ್ತದೆ ಎಂದು ಮೆಹಬೂಬ್ ಅಲಿ ತಿಳಿಸಿದ್ದಾರೆ.

ಪೊಲೀಸರ ಹಲ್ಲೆಯಿಂದ ಆದಿಲ್ ಸಾವನ್ನಪ್ಪಿಲ್ಲ- ಆದಿಲ್ ತಂದೆ ಖಲೀಮುಲ್ಲಾ.

ಈ ಕುರಿತು ಮಾತನಾಡಿರುವ ಆದಿಲ್ ತಂದೆ ಖಲೀಮುಲ್ಲಾ,  ನನ್ನ ಮಗನ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ. ಪೊಲೀಸರ ಹಲ್ಲೆಯಿಂದ ನನ್ನ ಮಗ ಮೃತಪಟ್ಟಿಲ್ಲ, ಲೋ ಬಿಪಿಯಾಗಿ ಮೃತಪಟ್ಟಿದ್ದಾನೆ. ನನ್ನ ಮಗ ಆದಿಲ್​ ಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ನಮಗೆ ಯಾವುದೇ ರೀತಿ ಅನುಮಾನ ಇಲ್ಲ. ಠಾಣೆಗೆ ಕಲ್ಲು ಹೊಡೆದವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

Key words: Twist – lockup- death- case-statements