ಸಾರಿಗೆ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡ್ರಾ ಸಚಿವ ರಾಮಲಿಂಗರೆಡ್ಡಿ..? ಈ ಕುರಿತು ಅವರ ಪ್ರತಿಕ್ರಿಯೆ ಏನು..?

ಬೆಂಗಳೂರು,ಮೇ,29,2023(www.justkannada.in):   ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ರಚನೆಯಾಗಿದ್ದು ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಈ ಮಧ್ಯೆ ಸಾರಿಗೆ ಖಾತೆ ನೀಡಿದ್ದಕ್ಕೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಿದ್ದರು. ಅವರನ್ನು ಮನವೊಲಿಸುವಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಸಚಿವ ಸ್ಥಾನ, ಖಾತೆ ಎನ್ನುವುದು ಶಾಶ್ವತ ಅಲ್ಲ. ಮಂತ್ರಿಗಳು ಕೂಡ ಬದಲಾಗುತ್ತಾರೆ. ಖಾತೆ ಕೂಡ ಬದಲಾಗುತ್ತೆ. ಸಚಿವ ಸ್ಥಾನಕ್ಕೆ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಬೇಕಿದ್ರೆ ಸಿದ್ದರಾಮಯ್ಯರವರನ್ನೇ ಕೇಳಿ. ಈ ಹಿಂದೆ ನಾಲ್ಕು ತಿಂಗಳು ಸಾರಿಗೆ ಇಲಾಖೆಯ ಸಚಿವನಾಗಿದ್ದೆ. ಹಲವು ಪ್ರಶಸ್ತಿ ನಮ್ಮ ಸಂಸ್ಥೆಗೆ ಬಂದಿದ್ದವು. ಹೀಗಾಗಿ ಸಮಾಧಾನ,ಅಸಮಾಧಾನ ಪ್ರಶ್ನೆ ಇಲ್ಲ. ಯಾವ ಖಾತೆ ಕೊಟ್ಟರು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ  ಎಂದು ತೀರ್ಮಾನಿಸಲಾಗಿದೆ. ಎಷ್ಟು ಜನ ಪ್ರಯಾಣ ಮಾಡುತ್ತಾರೆ ಎನ್ನುವುದಕ್ಕೆ ಸರ್ಕಾರ ಕೆಆರ್ ​ಟಿ‌ಸಿಗೆ ಹಣ ಕೊಡಬೇಕು. ಇಂದು ಸಭೆ ಇದ್ದು, ಎಲ್ಲಾ ತೀರ್ಮಾನಿಸಲಾಗುತ್ತದೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words:  transport -Minister- Ramalingareddy – reaction