ಅರಮನೆಯಲ್ಲಿ ಪಾರಂಪರಿಕ ದಸರಾ ಆಚರಣೆ: ಯದುವೀರ್ ರಿಂದ ಸರಸ್ವತಿ ಪೂಜೆ ಸಲ್ಲಿಕೆ.

ಮೈಸೂರು,ಅಕ್ಟೋಬರ್,12,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ, ಮೈಸೂರು ಅರಮನೆಯಲ್ಲಿ ಪಾರಂಪರಿಕ ದಸರಾ ಆಚರಣೆ ಸಂಭ್ರಮ ಮನೆ ಮಾಡಿದ್ದು ಇಂದು ಆರನೇ ದಿನ ಸರಸ್ವತಿ ಪೂಜೆ ಸಲ್ಲಿಸಲಾಯಿತು.

ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ  ಅವರು ಶ್ರದ್ದಾ ಭಕ್ತಿಯಿಂದ  ಸರಸ್ವತಿಗೆ ಪೂಜೆ ಸಲ್ಲಿಸಿದರು. ರಾಜಮನೆತನದ ಗ್ರಂಥಗಳು, ತಾಳೆಗಾರಿಗಳಿಗೆ ಸಂಗೀತ ಪರಿಕರಗಳಿಗೆ ಪೂಜೆ ಸಲ್ಲಿಸಲಾಯಿತು.  ಇನ್ನು ಕೊರೊನಾ  ಭೀತಿ ಹಿನ್ನೆಲೆ ಅರಮನೆ ಅರ್ಚಕರನ್ನು ಹೊರತುಪಡಿಸಿ ಸಾರ್ವಜನಿಕರೂ ಸೇರಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ.

Key words: Traditional Dasara -celebration –mysore- palace- Saraswati pooja