ಬೆಂಗಳೂರು ನಗರ ಉಸ್ತುವಾರಿ ಬಗ್ಗೆ ಕಾದು ನೋಡಿ- ಸಿಎಂ ಬಸವರಾಜ ಬೊಮ್ಮಾಯಿ.

ದಾವಣಗೆರೆ,ಅಕ್ಟೋಬರ್,12,2021(www.justkannada.in):  ಬೆಂಗಳೂರು ನಗರ ಉಸ್ತುವಾರಿ ಸಂಬಂಧ ಸಚಿವರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ನಡುವೆ ಮುಸುಕಿನ ಗುದ್ಧಾಟ ನಡೆಯುತ್ತಿದ್ದು ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು ನಗರ ಉಸ್ತುವಾರಿ ಬಗ್ಗೆ ಕಾದು ನೋಡಿ ಎಂದು ಹೇಳಿದ್ದಾರೆ.

ಇನ್ನು ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ. ಬಂಡಾಯ ಅಭ್ಯರ್ಥಿ ಬಳ್ಳಾರಿ ಕುಟುಂಬದ ಜತೆ ಉತ್ತಮ ಸಂಬಂಧವಿದೆ. ನಮ್ಮ ಮತ್ತು ಅವರ ಕುಟುಂಬದ ಜತೆ ಉತ್ತಮ ಸಂಬಂಧ ಇದೆ. ಹೀಗಾಗಿ ನಾನು ದಾವಣಗೆರೆಯಲ್ಲಿ ಇರೋದು ಗೊತ್ತಾಗಿ ಬಳ್ಳಾರಿ ಅವರು ಭೇಟಿಯಾಗಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯುವುದು ಅವರಿಗೆ ಬಿಟ್ಟ ವಿಚಾರ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words:  Watch out – Bangalore city –incharge- CM-Basavaraja Bommai

ENGLISH SUMMARY…

Bengaluru District In-charge responsibility: CM Basavaraj Bommai says wait and watch
Davanagere, October 12, 2021 (www.justkannada.in): As the fight between Minister R. Ashok and V.Somanna for the Bengaluru District In-charge continues, the Chief Minister today told the media to wait for some time.
Speaking to the press persons today, he informed that the BJP will win both the Hanagal and Sindhagi byelections. “We have a cordial relationship with Ballari’s rebel candidate. Our family shares a cordial relationship with theirs. Hence, they have come after knowing that I am in Davanagere. It is left to them whether to withdraw the nomination,” he said.
Keywords: Chief Minister Basavaraj Bommai/ Bengaluru District In-charge/ wait and see