ಏರೋಪ್ಲೇನ್ ಏರಲು ಟ್ರ್ಯಾಕ್ಟರ್ ಸವಾರಿ ! ಬೆಂಗಳೂರಲ್ಲಿ ಮಳೆ ತಂದಿಟ್ಟ ಅವಾಂತರ, ವೀಡಿಯೋ ವೈರಲ್ !!

ಬೆಂಗಳೂರು, ಅಕ್ಟೋಬರ್ 12, 2021 (www.justkannada.in): ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜನ, ಜೀವನ ಅಸ್ತವ್ಯಸ್ಥಗೊಂಡಿದೆ. ಸೋಮವಾರ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು.

ವಿಮಾನ ನಿಲ್ದಾಣದ ಬಳಿ ಭಾರೀ ಮಳೆಯ ಪರಿಣಾಮ ಪ್ರಯಾಣಿಕರು ಟ್ರ್ಯಾಕ್ಟರ್ ಏರಿ ಪ್ರಯಾಣಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಪರದಾಡಿದ್ದಾರೆ. ಕಳೆದ ರಾತ್ರಿ ಏರ್ಪೋಟ್ ರಸ್ತೆಯಲ್ಲೇ ಮಂಡಿಯುದ್ದಕ್ಕೆ ಮಳೆ ನೀರು ನಿಂತಿತ್ತು.

ಟರ್ಮಿನಲ್​​ನಿಂದ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಕರನ್ನು ಕಾರುಗಳ ಬಳಿ ಡ್ರಾಪ್ ಮಾಡಲಾಯಿತು. ಬೇರೆ ವಾಹನ ಇರದ ಕಾರಣ ಟ್ರ್ಯಾಕ್ಟರ್ ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಟ್ರ್ಯಾಕ್ಟರ್ ಏರಿದ ವಿಮಾನ ಪ್ರಯಾಣಿಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

key words: heavy rain effect, passenger got drop to bangalore airport by tractor