ಸಿಡ್ನಿ, ಜನವರಿ 13, 2019 (www.justkannada.in): ಬುಶ್ಫೈರ್ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದಾರೆ.
ಹೌದು. ಆಸಿಸ್ ನ ಮಾಜಿ ಕ್ರಿಕೆಟಿಗರು ಚಾರಿಟಿ ಮ್ಯಾಚ್ ಆಡಲು ಮುಂದಾಗಿದ್ದಾರೆ. ಫೆಬ್ರವರಿ 8ರಂದು ಮಾಜಿ ಕ್ರಿಕೆಟಿಗರ ನಡುವೆ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಬರುವ ಹಣವನ್ನ, ನೇರವಾಗಿ ಬುಶ್ಫೈರ್ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
ಗಿಲ್ಕ್ರಿಸ್ಟ್, ಬ್ರೆಟ್ ಲೀ, ಜಸ್ಟಿನ್ ಲ್ಯಾಂಗರ್, ಮೈಕಲ್ ಕ್ಲಾರ್ಕ್, ಶೇನ್ ವಾಟ್ಸನ್ ಮತ್ತು ಌಲೆಕ್ಸ್ ಬ್ಲಾಕ್ವೆಲ್ ಸೇರಿದಂತೆ ಇನ್ನೂ 10 ಮಂದಿ ಮಾಜಿ ಆಟಗಾರರು, ಈ ಪಂದ್ಯವನ್ನ ಆಡಲಿದ್ದಾರೆ. ಮಾಜಿ ನಾಯಕ ಸ್ಟೀವ್ ವ್ಹಾ ಮತ್ತು ಮಹಿಳಾ ತಂಡದ ಮಾಜಿ ಆಟಗಾರ್ತಿ ಮಿಲ್ ಜೋನ್ಸ್ ಸಹ ಮಾಜಿ ಕ್ರಿಕೆಟಿಗರಿಗೆ ಸಾಥ್ ನೀಡಲಿದ್ದಾರೆ.