ಐಸಿಸಿ ಟಿ20 ವಿಶ್ವಕಪ್: ತಂಡಗಳ ಸಂಖ್ಯೆ 20ಕ್ಕೆ ಏರಿಸಲು ನಿರ್ಧಾರ

ಬೆಂಗಳೂರು, ಜನವರಿ 13, 2019 (www.justkannada.in): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮತ್ತೆ 4 ಹೆಚ್ಚುವರಿ ತಂಡಗಳ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಹಾಲಿ ಇರುವ 16 ತಂಡಗಳ ಬದಲಿಗೆ 20 ತಂಡಗಳಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಈ ಕುರಿತಂತೆ ಐಸಿಸಿ ಮಹತ್ವದ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಐಸಿಸಿ ಮೂಲಗಳ ಪ್ರಕಾರ 2023ರಿಂದ 2031ರ ವರೆಗಿನ ಕ್ರಿಕೆಟ್ ಋತುವಿನಲ್ಲಿ ಈ 20 ತಂಡಗಳ ಪ್ರಯೋಗಾರ್ಥ ಟೂರ್ನಿ ಆಯೋಜನೆಗೆ ಮುಂದಾಗಿದೆ.