Friday, October 16, 2026

Dasara Wishes

Happy Dasara
Home Crime ಪತ್ನಿ ಮಗನನ್ನು ಕೊಂದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ

ಪತ್ನಿ ಮಗನನ್ನು ಕೊಂದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ

ದಕ್ಷಿಣಕನ್ನಡ,ನವೆಂಬರ್,9,2024 (www.justkannada.in): ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗನನ್ನು ಕೊಂದು ನಂತರ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾರ್ತಿಕ್ ಭಟ್ (32) ಎಂಬಾತನೇ ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಕೊಲೆ ಮಾಡಿ ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಫ್ಲಾಟ್ ನಲ್ಲಿ ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಭೀಕರವಾಗಿ ಕೊಲೆ ಮಾಡಿದ್ದಾನೆ.  ನಂತರ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೊರ ವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಕಾರ್ತಿಕ್ ಭಟ್ ಎಂಬುವುದು ಪತ್ತೆಯಾಗಿದೆ. ಕಾರ್ತಿಕ್ ಫ್ಲ್ಯಾಟ್ ಬಳಿಗೆ ಪೊಲೀಸರು ಬಂದಾಗ ಪತ್ನಿ ಹಾಗೂ ಪುತ್ರನ ಶವ ಕೂಡ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Wife, son, kills, husband, commits suicide