ಇಂದು ರಥಸಪ್ತಮಿ: ಮೈಸೂರಿನಲ್ಲಿ ಸಾವಿರಾರು ಯೋಗಾಸಕ್ತರಿಂದ ಸಾಮೂಹಿಕವಾಗಿ ಸೂರ್ಯ ನಮಸ್ಕಾರ….

ಮೈಸೂರು,ಫೆ.19,2021(www.justkannada.in):  ಇಂದು ರಥಸಪ್ತಮಿಯ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಯೋಗ ಆಸಕ್ತರು 108 ಸೂರ್ಯ ನಮಸ್ಕಾರ ಮಾಡಿದರು.today-ratha-sapthami-surya-namaskara-mysore-thousands

ಮೈಸೂರು ಯೋಗ ಒಕ್ಕೂಟದ ವತಿಯಿಂದ  ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಸೂರ್ಯ ನಮಸ್ಕಾರವನ್ನಿಂದು ಹಮ್ಮಿಕೊಳ್ಳಲಾಗಿತ್ತು.

ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ.  ಅದರಲ್ಲಿಯೂ ರಥಸಪ್ತಮಿಯ ದಿನವಾದ ಇಂದು ಸೂರ್ಯ ನಮಸ್ಕಾರ ಮಾಡಿದರೆ ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಲಿದೆ ಎನ್ನುವುದು ಒಂದು ನಂಬಿಕೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದಲೇ ನಡೆಯುತ್ತಿದೆ. ಸೂರ್ಯನಿಲ್ಲದೇ ಜೀವನಕ್ಕೆ ಅಸ್ತಿತ್ವ ಇರಲು ಸಾಧ್ಯವಿಲ್ಲ, ಹೀಗಾಗಿ ಹೀಗಾಗಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರಗಳು ಹಾಗೂ ಸಪ್ತಾಶ್ವಗಳ ಪ್ರತೀಕವಾಗಿ ಸಪ್ತ ನಮಸ್ಕಾರಗಳನ್ನು ಮಾಡುವುದು ವಿಶೇಷ.today-ratha-sapthami-surya-namaskara-mysore-thousands

ಪ್ರತಿವರ್ಷದಂತೆ ಈ ವರ್ಷವು ಕೂಡಾ ಅರಮನೆಯ ಕೋಟೆ ಆಂಜನೇಯ ಸ್ವಾಮಿಯ ದೇವಸ್ಥಾನದ ಮುಂಭಾಗ ಹದಿಹರೆಯವವರಿಂದ, ವೃದ್ಧರವರೆಗೂ ನೂರಾರು ಸಂಖ್ಯೆಯಲ್ಲಿ ಎಲ್ಲಾ ವಯೋಮಾನದ ಯೋಗಾಸಕ್ತರು ಭಾಗವಹಿಸಿ ಸೂರ್ಯನಿಗೆ ನಮಸ್ಕರಿಸಿದರು.

Key words: Today-ratha sapthami-Surya Namaskara – Mysore -thousands