ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲು.

ಕೊಡಗು,ಡಿಸೆಂಬರ್,30,2023(www.justkannada.in): ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯಲ್ಲಿ ನಡೆದಿದೆ.

ಮಂಗೇಟಿರ ಪಿ. ಆಕಾಶ್ ಬಿದ್ದಪ್ಪ, ಉಳುವಂಗಡ ಸುದೇಶ್ ಅಯ್ಯಪ್ಪ, ರಶಿಕ್  ಕುಂಜ್ಞಗಂಡ ಜೆ. ಮೃತಪಟ್ಟ ವಿದ್ಯಾರ್ಥಿಗಳು. ಮೃತರು ಪೊನ್ನಂಪೇಟೆ ಸಿಇಟಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.

ಸ್ನೇಹಿತರ ತಂಡ ನದಿಯಲ್ಲಿ ಈಜಲು ತೆರಳಿತ್ತು. ಈ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊನ್ನಂಪೇಟೆ ಠಾಣಾ ಪೊಲೀಸರು ಭೇಟಿ ನೀಡಿದ್ದು, ಮೃತರ ಗುರುತು ಪತ್ತೆಗೆ ಪೊಲೀಸರ ಕ್ರಮ ಕೈಗೊಂಡಿದ್ದಾರೆ.

Key words: Three students – swim – water death-kodagu