ಚಾಕು ತೋರಿಸಿ ಲಾರಿ ಚಾಲಕನ ಬಳಿ ಹಣ ದೋಚಿದ್ಧ ಆರೋಪಿಗಳು ಅಂದರ್…

ಮೈಸೂರು,ಅಕ್ಟೋಬರ್,8,2020(www.justkannada.in): ಚಾಕು ತೋರಿಸಿ ಲಾರಿ ಚಾಲಕನ ಬಳಿ ಹಣ ಮತ್ತು ಮೊಬೈಲ್ ದೋಚಿದ್ದ ಆರೋಪಿಗಳನ್ನ  ಮೈಸೂರು ಜಿಲ್ಲೆ ಕೆ. ಆರ್. ನಗರ ಠಾಣಾ ಪೊಲೀಸರು ಮಿಂಚಿನ ಕಾರ್ಯಾಚರಣೆ ಬಂಧಿಸಿದ್ದಾರೆ.jk-logo-justkannada-logo

ಕೆ. ಆರ್. ನಗರದ ಶರತ್ ಮತ್ತು ಬೋಳನಹಳ್ಳಿ ಗ್ರಾಮದ ವಾಸು ಬಂಧಿತ ಆರೋಪಿಗಳು. ಮೈಸೂರಿನಿಂದ ಹಾಸನಕ್ಕೆ ಹತ್ತಿ ತುಂಬಿಕೊಂಡು ಲಾರಿ ಹೋಗುತ್ತಿತ್ತು. ಈ ನಡುವೆ ದಾರಿ ಮಧ್ಯೆದಲ್ಲಿ ಹೆಡ್ ಲೈಟ್ ಶಾರ್ಟ್ ಆದ ಕಾರಣ  ಚಾಲಕ ರಂಜಿತ್ ಲಾರಿಯನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡಿದ್ದರು.

ಆ ಸಮಯದಲ್ಲಿ ಆರೋಪಿಗಳಿಬ್ಬರು ಲಾರಿ ಚಾಲಕನಿಗೆ ಚಾಕು ತೋರಿಸಿ ಚಾಲಕನಿಂದ 30 ಸಾವಿರ ನಗದು ಹಾಗೂ 19 ಸಾವಿರ ಬೆಲೆಬಾಳುವ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಕುರಿತು ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.mysore-kr-nagar-robbery-lorry-driver-arrest

ಘಟನೆ ನಡೆದು 24 ಗಂಟೆಯೊಳಗೆ ಕೆ.ಆರ್ ನಗರ ಠಾಣಾ ಪೊಲೀಸರು  ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ರಾಜು, ಪಿಎಸ್ಐ ಚೇತನ್ ಸೇರಿದಂತೆ ಸಿಬ್ಬಂದಿ ಭಾಗಿಯಾಗಿದ್ದರು.

Key words: mysore- KR Nagar-robbery-lorry driver-arrest