ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರ ಬಂಧನ: ಕೇಸ್ ದಾಖಲು…

ಬೆಂಗಳೂರು,ಜೂ,24,2020(www.justkannada.in):  ತಮಿಳುನಾಡಿನಿಂದ ಕಳ್ಳದಾರಿ ಮೂಲಕ ಬರುತ್ತಿದ್ದ ಏಳು ಮಂದಿ ಅಕ್ರಮ ನುಸುಳುಕೋರರನ್ನ ಅತ್ತಿಬೆಲೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನಿಂದ ರಾಜ್ಯಕ್ಕೆ ಕರೋನ ಹರಡುವ ಭೀತಿ ಎದುರಾಗಿರುವ ಹಿನ್ನೆಲೆ ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ನಡುವೆ  ಬಂಧಿತ ಏಳು ಜನರು ತಮಿಳುನಾಡಿನಿಂದ ಕಳ್ಳದಾರಿ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದರು.arrest-seven-illegal-coming-tamil-nadu-case

ಅತ್ತಿಬೆಲೆ ಸುತ್ತಮುತ್ತ ಕಳ್ಳ ದಾರಿಗಳಲ್ಲಿ  ನುಸುಳಿ ಬರುತ್ತಿದ್ದ ತಮಿಳುನಾಡು ಮೂಲದ 7 ಜನರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಇದೀಗ ಏಳು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Key words: Arrest – seven- illegal- coming – Tamil Nadu-Case